ಸೋಮವಾರ, ಮೇ 10, 2021
25 °C

ಪೂನಂ ಮೊದಲ ಮಿಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೂನಂ ಮೊದಲ ಮಿಂಚು

ಸದಾ ಒಂದಿಲ್ಲೊಂದು ವಿವಾದದ ಜಡಿಮಳೆಯಲ್ಲಿ ತೊಯ್ಯುವ ನಟಿ ಪೂನಂ ಪಾಂಡೆ ಗಾಸಿಪ್‌ಗಳನ್ನೇ ಉಸಿರಾಗಿಸಿಕೊಂಡಾಕೆ. ವಿವಾದಗಳ ಮಳೆಯಲ್ಲಿ ಜಳಕಮಾಡುತ್ತಾ ಪುಳಕಗೊಳ್ಳುವ ಪೂನಂ ಅಭಿನಯಿಸಿರುವ ಮೊದಲ ಚಿತ್ರ `ನಶಾ' ಜುಲೈ 26ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಅದಕ್ಕೂ ಮುನ್ನ ಅಂದರೆ, `ನಶಾ' ಚಿತ್ರದ ಟ್ರೈಲರ್ ಜೂನ್ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆಯಂತೆ.ಶೃಂಗಾರರಸ ಢಾಳಾಗಿರುವ `ನಶಾ' ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನಿರ್ದೇಶಕ ಅಮಿತ್ ಸಕ್ಸೇನಾ ಕೂಡಾ ಇಂತಹ ಕಾಮಪ್ರಚೋದಕ ಸಿನಿಮಾ ತಯಾರಿಸುವಲ್ಲಿ ಪಳಗಿದವರು. ಬಿಪಾಶಾ ಬಸು ಮತ್ತು ಜಾನ್ ಅಬ್ರಾಹಂ ನಟಿಸಿದ್ದ `ಜಿಸ್ಮ್' ಚಿತ್ರವನ್ನು ನಿರ್ದೇಶನ ಮಾಡಿದ್ದು ಇದೇ ಅಮಿತ್.`ಜಿಸ್ಮ್' ಚಿತ್ರಕಥೆ ಪ್ಲೇಬಾಯ್‌ನಂಥ ಕುಡುಕ ಲಾಯರ್ ಹಾಗೂ ವಿವಾಹಿತ ಮಹಿಳೆಯ ನಡುವೆ ನಡೆವ ಪ್ರಣಯದಾಟದ ಸುತ್ತ ಇದ್ದರೆ, `ನಶಾ' ಚಿತ್ರದ ಕಥೆ 18 ವರ್ಷದ ಹುಡುಗನನ್ನು 25 ವರ್ಷ ವಯಸ್ಸಿನ ಯುವತಿಯೊಬ್ಬಳು ಮೋಹಿಸುವುದರ ಸುತ್ತ ಸುತ್ತುತ್ತದಂತೆ.`ಪೂನಂ ಪಾಂಡೆ ನಟಿಸಿರುವ `ನಶಾ' ಚಿತ್ರ ಬಿಡುಗಡೆಗೆ ಸಿದ್ಧಗೊಂಡಿದೆ. ಈ ಚಿತ್ರವನ್ನು ಜುಲೈ ತಿಂಗಳ ಕೊನೆ ವಾರದಲ್ಲಿ ಬಿಡುಗಡೆ ಮಾಡಲಾಗುವುದು. ಜೂನ್ ಮೊದಲ ವಾರದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಗೊಳ್ಳಲಿದೆ. `ನಶಾ' ಚಿತ್ರ ಒಂದು ಸಿಂಪಲ್ ಲವ್‌ಸ್ಟೋರಿ. ಈ ಚಿತ್ರದಲ್ಲಿ ಕಾಮವನ್ನು ಪ್ರಚೋದಿಸುವ ಸಾಕಷ್ಟು ದೃಶ್ಯಗಳಿವೆ. ಈ ಚಿತ್ರದಲ್ಲಿ ಪೂನಂ ಮೈಚಳಿ ಬಿಟ್ಟು ನಟಿಸಿದ್ದಾರೆ' ಎನ್ನುತ್ತಾರೆ ನಿರ್ದೇಶಕ ಅಮಿತ್ ಸಕ್ಸೇನಾ.`ನಶಾ' ಚಿತ್ರದಲ್ಲಿ ಹಸಿಬಿಸಿಯಾಗಿ ಕಾಣಿಸಿಕೊಂಡಿರುವ ಪೂನಂ ಪಾತ್ರಕ್ಕಾಗಿ ದೇಹತೂಕ ಹೆಚ್ಚಿಸಿಕೊಳ್ಳಲು ಜಂಕ್ ಫುಡ್ ಮೊರೆ ಹೋಗಿದ್ದರಂತೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.