ಗುರುವಾರ , ಜೂನ್ 24, 2021
24 °C

ಪೂರ್ಣಗೊಳ್ಳುವ ಹಂತದಲ್ಲಿ ಯುವಿ ಕಿಮೋಥೆರಪಿ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ನೀಡಲಾಗುತ್ತಿದ್ದ ಕಿಮೋಥೆರಪಿ ಚಿಕಿತ್ಸೆ ಪೂರ್ಣಗೊಳ್ಳುವ ಹಂತದಲ್ಲಿದೆ.

ಶ್ವಾಸಕೋಶದ ನಡುವೆ ಆಗಿದ್ದ ಗೆಡ್ಡೆ ಕರಗಿಸಲು ಅಮೆರಿಕಾದ ಬಾಸ್ಟನ್‌ನಲ್ಲಿ `ಯುವಿ~ ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದು. ಇನ್ನು ನಾಲ್ಕು ದಿನಗಳಲ್ಲಿ ಕೊನೆಯ ಹಂತದ ಚಿಕಿತ್ಸೆ ಮುಗಿಯಲಿದೆ. ಆದ್ದರಿಂದ ಅವರು ಉತ್ಸಾಹಿತರಾಗಿದ್ದಾರೆ.

`ಟ್ವಿಟರ್~ನಲ್ಲಿ ಸಂದೇಶ ಹರಿಬಿಟ್ಟಿರುವ `ಯುವಿ~ ಮಂಗಳವಾರ ಈ ಸಂತಸವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. `ಕೊನೆಯ ನಾಲ್ಕು ದಿನಗಳು ಮಾತ್ರ. ಕಾತರದಿಂದ ಕಾಯ್ದಿದ್ದೇನೆ. ಈ ಎಲ್ಲ ತೊಂದರೆಯಿಂದ ಮುಕ್ತವಾಗಿಸು ದೇವರೆ~ ಎಂದು ಹೇಳಿಕೊಂಡಿದ್ದಾರೆ.

ಕ್ರಿಕೆಟ್ ಆಟಗಾರನ ಶ್ವಾಸಕೋಶದ ಗೆಡ್ಡೆಯು ಮೊದಲ ಸುತ್ತಿನ ಚಿಕಿತ್ಸೆಯಲ್ಲಿಯೇ ಸಂಪೂರ್ಣವಾಗಿ ಹೋಗಿದೆ. ಅದನ್ನು ಈ ಮೊದಲೇ ವೈದ್ಯರು  ಖಚಿತಪಡಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.