ಮಂಗಳವಾರ, ಏಪ್ರಿಲ್ 13, 2021
23 °C

ಪೂರ್ವ ಏಷ್ಯಾ ಶೃಂಗ ಸಭೆ: ಕಾಂಬೋಡಿಯಾಕ್ಕೆ ಬಂದಿಳಿದ ಪ್ರಧಾನಿ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಮ್ ಪೆನ್ನ್ಃ, ಕಾಂಬೋಡಿಯಾ (ಪಿಟಿಐ, ಐಎಎನ್‌ಎಸ್): 10ನೇ ಆಸಿಯನ್ ಮತ್ತು 7ನೇ ಪೂರ್ವ ಏಷ್ಯಾ ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಭಾನುವಾರ ಕಾಂಬೋಡಿಯನ್ ರಾಜಧಾನಿಗೆ ಬಂದಿಳಿದರು.ರಾಷ್ಟ್ರದ ಆರ್ಥಿಕ ಬಿಕ್ಕಟ್ಟಿನ ನಡುವೆಯು ಪೂರ್ವ ಏಷ್ಯಾ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿಗೆ ಸಹಕಾರ ಹಾಗೂ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಹಲವು ವಿಷಯಗಳ ಕುರಿತು ಈ ಪ್ರಾದೇಶಿಕ ಶೃಂಗಸಭೆಗಳಲ್ಲಿ ಪ್ರಧಾನಿಯವರು ಚರ್ಚೆ ನಡೆಸಲಿದ್ದಾರೆ.ನ.18ರಿಂದ 20ರವರೆಗೆ  ಮೂರು ದಿನ ನಡೆಯಲಿರುವ ಆಸಿಯನ್ ಹಾಗೂ ಪೂರ್ವ ಏಷ್ಯಾ ರಾಷ್ಟ್ರಗಳ ಶೃಂಗಸಭೆಯಲ್ಲಿ ಪೂರ್ವ ಏಷ್ಯಾದ ರಾಷ್ಟ್ರಗಳ ಪ್ರಮುಖ ನಾಯಕರು ಹಾಗೂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.ಮೂರು ದಿನಗಳ ಈ ಭೇಟಿ ಸಂದರ್ಭದಲ್ಲಿ ಪ್ರಧಾನಿ ಸಿಂಗ್ ಅವರು ಚೀನಾದ ಪ್ರಧಾನಿ ವೆನ್ ಜಿಯಾಬಾವೊ ಸೇರಿದಂತೆ ಆಸಿಯನ್ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಿಂದ ಮೂಲೆಗುಂಪಾಗಿರುವ ಇತರೆ ರಾಷ್ಟ್ರಗಳ ಜಾಗತಿಕ ನಾಯಕರನ್ನು ಭೇಟಿಯಾಗಿ ಚರ್ಚಿಸುವ ಸಾಧ್ಯತೆ ಇದೆ.`ಭಾರತವು ಆಸಿಯನ್ ರಾಷ್ಟ್ರಗಳ ಪಾಲುದಾರಿಕೆ ರಾಷ್ಟ್ರವಾಗಿದ್ದು, ಏಷ್ಯಾದ ಪೂರ್ವ ದೇಶಗಳ ನೀತಿಯ (ಲುಕ್ ಈಸ್ಟ್ ಪಾಲಿಸಿ) ಪ್ರಮುಖ ಭಾಗವಾಗಿದೆ~ ಎಂದು ಪ್ರಧಾನಿ ಸಿಂಗ್ ಅವರು ಇಲ್ಲಿಗೆ ಆಗಮಿಸುವ ಮುಂಚೆ ಇಲ್ಲಿ ಪ್ರಸ್ತಾಪಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.