ಭಾನುವಾರ, ಏಪ್ರಿಲ್ 18, 2021
24 °C

ಪೂರ್ವ ಚಾಲಿತ ಸಿಮ್ ಮಾರಾಟಕ್ಕೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಸುಪ್ರೀಂಕೋರ್ಟ್ ಆದೇಶದ ಅನ್ವಯ ಇನ್ನು ಮುಂದೆ ಗ್ರಾಹಕರಿಗೆ `ಪೂರ್ವ ಚಾಲಿತ ಸಿಮ್ ಕಾರ್ಡ್~ಗಳನ್ನು (ಪ್ರೀ ಆಕ್ಟಿವೇಟೆಡ್) ವಿತರಿಸದಂತೆ ಕೇಂದ್ರ ಸರ್ಕಾರ ದೂರಸಂಪರ್ಕ ಸೇವಾ ಕಂಪೆನಿಗಳಿಗೆ ಆದೇಶಿಸಿದೆ.`ಒಂದು ಪಕ್ಷ ಇಂಥ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಿದ್ದು ಪತ್ತೆಯಾದರೆ, ಆ ಕ್ಷಣದಿಂದ ಚಂದಾದಾರರ ಸಂಪರ್ಕ ಕಡಿತಗೊಳಿಸಲಾಗುವುದು. ಜತೆಗೆ, ರೂ 50,000 ದಂಡ ವಿಧಿಸಲಾಗುತ್ತದೆ~ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.ದೂರಸಂಪರ್ಕ ಇಲಾಖೆಯು ರಚಿಸಿದ್ದ ತಜ್ಞರ ಜಂಟಿ ಸಮಿತಿಯು ಹೊಸದಾಗಿ ಪೂರ್ವ ಪಾವತಿ (ಪ್ರೀ ಪೇಯ್ಡ) ಅಥವಾ ನಂತರದ ಪಾವತಿ (ಪೋಸ್ಟ್ ಪೇಯ್ಡ) ಸಂಪರ್ಕ ಪಡೆಯುವವರ ದಾಖಲೆ ಪತ್ರಗಳನ್ನು ಪರಿಶೀಲಿಸುವಂತೆ ಮೊಬೈಲ್ ಕಂಪೆನಿಗಳಿಗೆ ಹೊಸ ಮಾರ್ಗ ಸೂಚಿ ನೀಡಿದೆ.ಸಾರ್ವಜನಿಕ ಹಿತಾಸಕ್ತಿ ಅರ್ಜಿ:  `ದೇಶದ ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಸಿಮ್ ಕಾರ್ಡ್ ವಿತರಿಸುವ ಮುನ್ನ ಸಂಬಂಧಪಟ್ಟ ಕಂಪೆನಿಗಳು ಚಂದಾದಾರರ ಪೂರ್ವಪರ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು~ ಎಂದು  ಏಪ್ರಿಲ್ 27ರಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು.`ಪ್ರೀ ಪೇಯ್ಡ ಸಿಮ್ ಕಾರ್ಡ್ ನೀಡುವಾಗ ಕಂಪೆನಿಗಳು ಪೂರ್ವ ಚಾಲಿತ (ಪ್ರೀ ಆಕ್ಟಿವೇಟೆಡ್) ಕಾರ್ಡ್‌ಗಳನ್ನು ವಿತರಿಸುತ್ತಿದ್ದು, ಇದರಿಂದ ದೇಶದ ಭದ್ರತೆ ಮತ್ತು ಸುರಕ್ಷತೆಗೆ ಧಕ್ಕೆಯುಂಟಾಗುತ್ತದೆ~ ಎಂದು ಕೋಲ್ಕತ್ತಾ ಮೂಲದ ಅವಿಶೇಖ್ ಗೋಯೆಂಕಾ ಸುಪ್ರೀಂಕೋರ್ಟ್‌ಗೆ  ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿದ್ದರು.2008ರಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದ ತನಿಖೆ ವೇಳೆ ಉಗ್ರರು ನಕಲಿ ದಾಖಲೆಗಳನ್ನು ಸಲ್ಲಿಸಿ ಸಿಮ್ ಕಾರ್ಡ್ ಪಡೆದಿದ್ದನ್ನು ಗೋಯೆಂಕಾ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.