ಗುರುವಾರ , ಮೇ 6, 2021
31 °C

ಪೂರ್ವ ತಯಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಇಕ್ಯೂಇಯನ್ನು ಒಂದು ಕಾರ್ಯಕ್ರಮ ಎನ್ನುವುದಕ್ಕಿಂತಲೂ ನಿರಂತರ ಪ್ರಕ್ರಿಯೆ ಎನ್ನುವುದೇ ಸೂಕ್ತ. ಇದರ ಮುಖ್ಯ ಉದ್ದೇಶವೇ ಇಡೀ ಕಾಲೇಜು ಮಟ್ಟದಲ್ಲಿ ಸಮಗ್ರ ಸುಧಾರಣೆ ತರುವುದು.ಇದಕ್ಕೊಂದು ಹಿನ್ನೆಲೆಯೂ ಇದೆ. ಪ್ರತಿಯೊಂದು ಶಿಕ್ಷಣ ಸಂಸ್ಥೆಯೂ ನ್ಯಾಕ್ ಮಾನ್ಯತೆ ಪಡೆಯಲು ಬಯಸುತ್ತದೆ. ಅದರಲ್ಲೂ ಖಾಸಗಿ ಕಾಲೇಜುಗಳಲ್ಲಿ ಈ ಪೈಪೋಟಿ ಜಾಸ್ತಿ. ಆದರೆ ಬಹುತೇಕ ಸರ್ಕಾರಿ ಕಾಲೇಜುಗಳು ಮಾತ್ರ ನ್ಯಾಕ್ ಮೌಲ್ಯಮಾಪನಕ್ಕೆ ಒಳಪಡಲು ಹಿಂಜರಿಯುತ್ತವೆ.ರಾಜ್ಯದಲ್ಲಿ 365 ಸರ್ಕಾರಿ ಕಾಲೇಜುಗಳಿವೆ. ಅವುಗಳಲ್ಲಿ 174 ಕಾಲೇಜುಗಳಷ್ಟೇ ನ್ಯಾಕ್‌ಗೆ ಅರ್ಜಿ ಸಲ್ಲಿಸುವ ಅರ್ಹತೆ ಪಡೆದಿವೆ. ಇನ್ನುಳಿದವು ಮೂಲ ಸೌಕರ್ಯ ಮತ್ತಿತರ ಕೊರತೆಯಿಂದ ನ್ಯಾಕ್ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಅರ್ಹತೆಯನ್ನೂ ಗಳಿಸಿಕೊಂಡಿಲ್ಲ. ಅರ್ಹತೆ ಇದ್ದವುಗಳಲ್ಲಿಯೂ ಎಷ್ಟು ಕಾಲೇಜುಗಳು ನ್ಯಾಕ್ ಮೌಲ್ಯಮಾಪನ ಗಳಿಸುವಲ್ಲಿ ಯಶಸ್ವಿಯಾಗುತ್ತವೆ ಎಂಬುದೂ ಸಂದೇಹಾಸ್ಪದ.ಅದಕ್ಕಾಗಿಯೇ ಬಂದಿದೆ ಸಿಇಕ್ಯೂಇ. ಇದೊಂದು ರೀತಿ ಪ್ರತಿಬಂಧಕ ಚುಚ್ಚುಮದ್ದು ಇದ್ದಂತೆ. ಅಂದರೆ ಇದು ನ್ಯಾಕ್ ಮಾನ್ಯತೆ ಪಡೆಯಲು ಸರ್ಕಾರಿ ಕಾಲೇಜುಗಳಿಗೆ ಪೂರ್ವ ತಾಲೀಮು. ಐದು ವರ್ಷಕ್ಕೊಮ್ಮೆ ನ್ಯಾಕ್ ಸಮಿತಿ ಬಂದಾಗ ಸರ್ವ ರೀತಿಯಲ್ಲೂ ಸಜ್ಜುಗೊಳ್ಳಲು ಅವಕಾಶ, ಮಾರ್ಗದರ್ಶನ ನೀಡುತ್ತದೆ. ಆದರೆ ಇದರಲ್ಲಿ 6 ತಿಂಗಳಿಗೊಮ್ಮೆ ಅಗ್ನಿ ಪರೀಕ್ಷೆ ಎದುರಿಸಬೇಕು.

 

ಅದಕ್ಕಾಗೇ ಕಾಲೇಜು ಪ್ರಾಚಾರ್ಯರು, ಅಧ್ಯಾಪಕರು, ಸಿಬ್ಬಂದಿಗೆ ಒಂದು ದಿನದ ತರಬೇತಿ ನೀಡಲಾಗಿದೆ. ವರದಿ ತಯಾರಿಕಾ ವೆಚ್ಚಕ್ಕಾಗಿ ಪ್ರತಿಯೊಂದು ಕಾಲೇಜಿಗೆ 10 ಸಾವಿರ ರೂ ಮಂಜೂರಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.