ಪೃಥ್ವಿರಾಜ್ ಈಗ ಹಾಟಿ

7

ಪೃಥ್ವಿರಾಜ್ ಈಗ ಹಾಟಿ

Published:
Updated:
ಪೃಥ್ವಿರಾಜ್ ಈಗ ಹಾಟಿ

`ಅಯ್ಯಾ~ ಚಿತ್ರದ `ಅಗ ಬಾಯ್~ ಹಾಡಿನಲ್ಲಿ ರಾಣಿ ಮುಖರ್ಜಿಯೊಂದಿಗೆ ಮಿಂಚುತ್ತಿರುವ ಪೃಥ್ವಿರಾಜ್‌ಗೆ ಈಗ ಹೊಸ ಹೆಸರೊಂದು ದೊರೆತಿದೆ.ಆ ಹಾಡಿನಲ್ಲಿ ಮಾದಕವಾಗಿ ನರ್ತಿಸಿದ ನಂತರ ರಾಣಿ ಅವರನ್ನು `ಹಾಟಿ~ ಎಂದು ಕರೆಯತೊಡಗಿದರಂತೆ.ಈ ನಟನ ಮೈಕಟ್ಟು `ಹಾಟ್ ಹಾಟ್~ ಆಗಿರುವುದರಿಂದ ರಾಣಿ ಸಲಿಗೆಯಿಂದ `ಹಾಟಿ~ ಎನ್ನತೊಡಗಿದರಂತೆ. ಸೆಟ್‌ನಲ್ಲಿ ಅದೇ ಹೆಸರು ಜಾರಿಗೆ ಬಂತು. ಸ್ಪಾಟ್ ಬಾಯ್ಸ ಸಹ `ಹಾಟಿ ಸರ್‌ಗೆ ಟೀ ಬೇಕಂತೆ~, `ಹಾಟಿ ಸರ್‌ಗೆ ಮೇಕಪ್ ಬೇಕಂತೆ...~ಎನ್ನತೊಡಗಿದರಂತೆ. ಅಯ್ಯಾ ಚಿತ್ರದ ಸೆಟ್‌ನಲ್ಲಿ ಪೃಥ್ವಿರಾಜ್ ಹೆಸರು ಮರೆಸುವಂತಾಗಿದ್ದು ರಾಣಿ ಮುಖರ್ಜಿ ಕರೆದ `ಹಾಟಿ~ಯಿಂದ. ಚಿತ್ರ ನಿರ್ಮಿಸಿದ ಅನುರಾಗ್ ಕಶ್ಯಪ್ ಸಹ ಈಗ ಅವರನ್ನು ಹಾಟಿ ಎಂದೇ ಸಂಬೋಧಿಸತೊಡಗಿದ್ದಾರಂತೆ.ಪೃಥ್ವಿರಾಜ್‌ಗೆ ಮೊದಮೊದಲು ಮುಜುಗರವೆನಿಸಿದರೂ, ರಾಣಿ ಅದನ್ನು ಅತಿ ಮೆಚ್ಚುಗೆಯಿಂದ ಹೇಳಿರುವುದಾಗಿ ಸ್ಪಷ್ಟಪಡಿಸಿದಾಗ, ಸಂತಸದಿಂದಲೇ ಸ್ವೀಕರಿಸಿದರಂತೆ. ಇದೀಗ ಬಾಲಿವುಡ್‌ನಲ್ಲಿ ಹೊಸ `ಹಾಟಿ~ಯದೇ ಚರ್ಚೆ ಹೆಚ್ಚಾಗಿದೆ.      

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry