ಪೃಥ್ವಿ-ಎಷ್ಟು ಪರಿಚಿತ?

7

ಪೃಥ್ವಿ-ಎಷ್ಟು ಪರಿಚಿತ?

Published:
Updated:

1. ನಮ್ಮ ಭೂಮಿಯ ಒಂದು ಉಪಗ್ರಹ ಚಿತ್ರ ಇಲ್ಲಿದೆ (ಚಿತ್ರ-1). ನಮ್ಮ ಭೂಗೋಳವನ್ನು ಕುರಿತ ಈ ಅಂಕಿ-ಅಂಶಗಳನ್ನು ತಿಳಿಸಬಲ್ಲೆರಾ?

ಅ. ಭೂಮಿಯ ಸರಾಸರಿ ವ್ಯಾಸ

ಬ. ಭೂಮಿಯ ವಯಸ್ಸು

ಕ. ಸೂರ್ಯನಿಂದ ಭೂಮಿಗಿರುವ ಸರಾಸರಿ ದೂರ

 

2. ಪೃಥ್ವಿಯ ಆಂತರ್ಯದ ಪದರ ರಚನೆಯನ್ನು ತೋರಿಸುವ ಚಿತ್ರ ಇಲ್ಲಿದೆ (ಚಿತ್ರ-2). ಗರ್ಭ, ಕವಚ ಮತ್ತು ತೊಗಟೆ ಎಂಬ ಈ ಮೂರೂ ಪದರಗಳಲ್ಲಿ-

ಅ. ಅತ್ಯಂತ ತೆಳ್ಳಗಿರುವ ಪದರ ಯಾವುದು?

ಬ. ಅತ್ಯಂತ ದಪ್ಪ ಪದರ ಯಾವುದು?

ಕ. ಗರಿಷ್ಠ ಉಷ್ಣತೆಯ ಪದರ ಯಾವುದು?

ಡ. ಶಿಲಾಪಾಕ ಭರಿತ ಪದರ ಯಾವುದು?

ಇ. ಅತ್ಯಂತ ಹಗುರ ಪದರ ಯಾವುದು?

 

3. ತೆಳ್ಳನೆಯ ಸಿಪ್ಪೆಯಂತೆ ಭೂಮಿಯನ್ನು ಆವರಿಸಿ ಅಪ್ಪಿ ನಿಂತಿರುವ ವಾಯುಮಂಡಲವನ್ನು ಚಿತ್ರ-3 ರಲ್ಲಿ ಗಮನಿಸಿ. ಭೂ ವಾಯುಮಂಡಲದಲ್ಲಿ ಗರಿಷ್ಠ ಪ್ರಮಾಣದಲ್ಲಿರುವ ಅನಿಲ ಯಾವುದು?

ಅ. ಆಮ್ಲಜನಕ

ಬ. ಸಾರಜನಕ

ಕ. ನೀರಾವಿ

ಡ. ಇಂಗಾಲದ ಡೈ ಆಕ್ಸೈಡ್

 

4. ಹವಾ ವಿದ್ಯಮಾನವೊಂದರ ಉಪಗ್ರಹ ಚಿತ್ರ ಇಲ್ಲಿದೆ (ಚಿತ್ರ-4). ಈ ವಿದ್ಯಮಾನ ಯಾವುದು ಗುರುತಿಸಬಲ್ಲಿರಾ?

ಅ. ಮಳೆ ಮೋಡರಾಶಿ

ಬ. ಸುಂಟರಗಾಳಿ

ಕ. ಬಿರುಗಾಳಿ

ಡ. ಸೈಕ್ಲೋನ್

 

5. ನೆಲದಲ್ಲಿನ ಅತ್ಯುಪಯುಕ್ತ ನಿಕ್ಷೇಪವೊಂದರ ನೆಲೆಗಳನ್ನು ಭೂಪಟದಲ್ಲಿ (ಚಿತ್ರ-5) ಗುರುತಿಸಲಾಗಿದೆ. ಯಾವುದು ಆ ನಿಕ್ಷೇಪ?

ಅ. ಚಿನ್ನ

ಬ. ಕಬ್ಬಿಣ

ಕ. ಕಲ್ಲಿದ್ದಿಲು

ಡ. ತಾಮ್ರ

 

6. ಕೈಗಾರಿಕಾ ಮಾಲಿನ್ಯ ವಿಪರೀತವಾಗಿರುವ ಪ್ರದೇಶಗಳಲ್ಲಿ ಅಡವಿಗಳನ್ನು ಹಾಳುಗೆಡಹುವ ದೃಶ್ಯವೊಂದು ಚಿತ್ರ-6 ರಲ್ಲಿದೆ. ಈ ವಿದ್ಯಮಾನವನ್ನು ಗುರುತಿಸಬಲ್ಲಿರಾ?

ಅ. ಆಮ್ಲ ಮಳೆ

ಬ. ಕಾಡು ಕಿಚ್ಚು

ಕ. ಕೀಟಗಳ ಹಾವಳಿ

ಡ. ಧೂಳಿನ ಹಾವಳಿ

 

7. ವಿಸ್ಮಯದ ಆಕಾರ ತಳೆದು ನಿಂತಿರುವ ಬೃಹತ್ ಬಂಡೆಯೊಂದು ಚಿತ್ರ-7 ರಲ್ಲಿದೆ. ನಿಸರ್ಗದಲ್ಲಿ ಇಂಥ ಬಂಡೆ ಶಿಲ್ಪಗಳನ್ನು ರೂಪಿಸುವ `ಶಕ್ತಿ~ ಇವುಗಳಲ್ಲಿ ಯಾವುದು?

ಅ. ಭೂಕಂಪ

ಬ. ಜ್ವಾಲಾಮುಖಿ ಸ್ಫೋಟ

ಕ. ಶಿಥಿಲೀಕರಣ

ಡ. ಲಾವಾ ಪ್ರವಾಹ

 

8. `ಪಳೆಯುಳಿಕೆ ಇಂಧನ~ವೊಂದನ್ನು ಹೊರತೆಗೆಯಲು ಸ್ಥಾಪಿಸಿರುವ ಯಂತ್ರಸ್ಥಾವರವೊಂದು ಚಿತ್ರದಲ್ಲಿದೆ.

ಅ. ಪಳೆಯುಳಿಕೆ ಇಂಧನಗಳು ಯಾವುವು?

ಬ. ಅವುಗಳಿಗೆ ಏಕೆ ಈ ಹೆಸರು?

 

9. ಧರೆಯ ಪ್ರಸಿದ್ಧ ಭೂಖಂಡ ಚಿತ್ರ-9 ರಲ್ಲಿದೆ.

ಅ. ಈ ಭೂಖಂಡ ಯಾವುದು?

ಬ. ಈ ಭೂಖಂಡವನ್ನು ಸುತ್ತುವರಿದಿರುವ ಸಾಗರ ಯಾವುದು?

ಕ. ಈ ಖಂಡದಲ್ಲಿರುವ `ಧ್ರುವ~ ಯಾವುದು?

 

10. ಮಾನವ ನಿರ್ಮಿತ ಬಂಜರು ಪ್ರದೇಶವೊಂದರ ಭೀಕರ ದೃಶ್ಯ ಚಿತ್ರ-10 ರಲ್ಲಿದೆ. ಈ ದೃಶ್ಯದ ಇಡೀ ಪರಿಸರವನ್ನು ಗಮನಿಸಿ ಇದಕ್ಕೆ ಕಾರಣವಾದ ಮಾನವ ಅಕೃತ್ಯವನ್ನು ಗುರುತಿಸಿ:

ಅ. ಅರಣ್ಯ ನಾಶ

ಬ. ಅತೀವ ರಸಗೊಬ್ಬರ ಬಳಕೆ

ಕ. ಅಂತರ್ಜಲದ ದುಂದು ಬಳಕೆ

ಡ. ಕೀಟನಾಶಕಗಳ ಅತಿ ಬಳಕೆ

 

11. ಭೂ ನೆಲದಿಂದ ತೆಗೆದಿರುವ ಖನಿಜವೊಂದು ಚಿತ್ರ-11 ರಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿ ಖನಿಜಗಳು ಮತ್ತು ಅದಿರುಗಳನ್ನು ಪ್ರತ್ಯೇಕಿಸಿ:

ಅ. ಕ್ವಾರ್ಟ್ಜ್

ಬ. ಗೆಲಿನಾ

ಕ. ಸಿನಬಾರ್

ಡ. ಕಲ್ನಾರು

ಇ. ಅಭ್ರಕ

ಈ. ಹೀಮಟೈಟ್

ಉ. ಗ್ರಾಫೈಟ್

ಟ. ಅರ್ಜಂಟೈಟ್12. ನೈಸರ್ಗಿಕ ಕುದಿ ನೀರಿನ ಚಿಲುಮೆಯೊಂದರ ವರ್ಣ ಚಿತ್ತಾರಗಳನ್ನು ಚಿತ್ರ-12 ರಲ್ಲಿ ನೋಡಿ. ಇಂಥ ನೆಲೆಗಳಲ್ಲಿನ ವರ್ಣಗಳಿಗೆ ಕಾರಣ ಏನು?

ಅ. ನೀರಾವಿ

ಬ. ನೀರಿನ ತೀವ್ರ ಉಷ್ಣತೆ

ಕ. ನೀರಲ್ಲಿನ ವಿವಿಧ ಸೂಕ್ಷ್ಮಜೀವಿಗಳು

ಡ. ನೀರಲ್ಲಿ ಕರಗಿದ ಖನಿಜಾಂಶಗಳು

ಇ. ಪಾಚಿ ಸಸ್ಯಗಳು

 

 ಉತ್ತರಗಳು1. ಅ-12735 ಕಿ.ಮೀ; ಬ-500 ಕೋಟಿ ವರ್ಷ;

    ಕ-150 ದಶಲಕ್ಷ ಕಿ.ಮೀ.

2. ಅ-ತೊಗಟೆ; ಬ-ಗರ್ಭ; ಕ-ಗರ್ಭ; ಡ-ಕವಚ; ಇ-ತೊಗಟೆ.

3. ಬ-ಸಾರಜನಕ.

4. ಡ-ಸೈಕ್ಲೋನ್.

5. ಕ-ಕಲ್ಲಿದ್ದಿಲು.

6. ಅ-ಆಮ್ಲಮಳೆ.

7. ಕ-ಶಿಥಿಲೀಕರಣ.

8. ಅ-ತೈಲ, ನೈಸರ್ಗಿಕ ಅನಿಲ, ಕಲ್ಲಿದ್ದಿಲು.

    ಬ-ಪ್ರಾಚೀನ ಪ್ರಾಣಿ- ಸಸ್ಯ ಅವಶೇಷಗಳಿಂದ ರೂಪುಗೊಳ್ಳುತ್ತವೆ.

9. ಅ-ಅಂಟಾರ್ಕ್ಟಿಕಾ; ಬ-ದಕ್ಷಿಣ ಸಾಗರ; ಕ-ದಕ್ಷಿಣ ಧ್ರುವ.

10. ಅ-ಅರಣ್ಯನಾಶ.

11. ಖನಿಜಗಳು: ಅ, ಡ, ಇ ಮತ್ತು ಉ. ಉಳಿದವು ಅದಿರುಗಳು.

12. ಖನಿಜಾಂಶಗಳು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry