ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ

7

ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ

Published:
Updated:

ಬೆಂಗಳೂರು: ಕೇಂದ್ರ ಸರ್ಕಾರ ತೈಲ ಬೆಲೆ ಹೆಚ್ಚಿಸಿರುವುದರಿಂದ ನಗರ­ದಲ್ಲೂ ಶುಕ್ರವಾರ ಮಧ್ಯರಾತ್ರಿಯಿಂದ ಪೆಟ್ರೋಲ್‌, ಡೀಸೆಲ್ ಬೆಲೆ ಹೆಚ್ಚಳವಾಗಿದೆ.

ನಗರದ ಒಳ ಭಾಗದ ಬಂಕ್‌ಗಳಲ್ಲಿ ಈ ಹಿಂದೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 78.38 ಇತ್ತು. ಇದೀಗ ಬೆಲೆ ಹೆಚ್ಚಳದಿಂದ ಪರಿಷ್ಕೃತ ದರ ರೂ. 79.38 ಆಗಿದೆ.ನಗರದ ಹೊರ ಭಾಗದ ಬಂಕ್‌ಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ರೂ. 78.83 ಕ್ಕೆ ಏರಿದೆ. ನಗರದ ಒಳಭಾಗದಲ್ಲಿ ಈ ಹಿಂದೆ ರೂ.  58.40 ಇದ್ದ ಡೀಸೆಲ್ ಬೆಲೆ ಈಗ ರೂ. 59.01ಕ್ಕೆ ಹೆಚ್ಚಳವಾಗಿದೆ. ನಗರದ ಹೊರ ಭಾಗದ ಬಂಕ್‌ಗಳಲ್ಲಿ ಡೀಸೆಲ್‌ ಬೆಲೆ ರೂ. 58.96ಕ್ಕೆ ಏರಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry