ಭಾನುವಾರ, ಡಿಸೆಂಬರ್ 8, 2019
25 °C
ಡೀಸೆಲ್‌, ಸೀಮೆಎಣ್ಣೆ, ಎಲ್‌ಪಿಜಿ ಏರಿಕೆ ಶೀಘ್ರ

ಪೆಟ್ರೋಲ್‌ ಲೀಟರ್‌ಗೆ ರೂ 1.63 ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೆಟ್ರೋಲ್‌ ಲೀಟರ್‌ಗೆ ರೂ 1.63 ಹೆಚ್ಚಳ

ನವದೆಹಲಿ (ಪಿಟಿಐ): ಪೆಟ್ರೋಲ್‌ ದರ­ವನ್ನು ಲೀಟರ್‌ಗೆ ರೂ 1.63 ಹೆಚ್ಚಿಸ­ಲಾಗಿದೆ. ಹೊಸ ದರ ಶುಕ್ರ­ವಾರ ಮಧ್ಯ­­ರಾತ್ರಿ­ಯಿಂದಲೇ ಜಾರಿಗೆ ಬಂದಿದೆ.

ಈ ದರವು ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ ಹೊರತುಪಡಿಸಿ­ದ್ದು, ಗ್ರಾಹಕರನ್ನು ತಲುಪುವಾಗ ಇವುಗಳನ್ನು ಸೇರಿಸಿ ಇನ್ನೂ ಹೆಚ್ಚಳವಾಗ­ಲಿದೆ. ಕಳೆದ ಜೂನ್‌ನಿಂದ ಸತತ ಏಳನೇ ದರ ಏರಿಕೆ ಇದಾಗಿದೆ.ತೈಲ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತದ ಹಿನ್ನೆಲೆ­ಯಲ್ಲಿ ದರ ಏರಿಕೆ ನಿರ್ಧಾರ ಮಾಡಲಾಗಿದೆ ಎಂದು ತೈಲ ಸಂಸ್ಥೆ­ಗಳು ತಿಳಿಸಿವೆ. ಈ ಮಧ್ಯೆ, ಶೀಘ್ರವೇ ಡೀಸೆಲ್‌ ದರ ಲೀಟರ್‌ಗೆ ರೂ 35, ಸೀಮೆಎಣ್ಣೆ ಲೀಟ­ರ್‌ಗೆ ರೂ 2 ಹಾಗೂ ಎಲ್‌ಪಿಜಿ ಸಿಲಿಂಡ­ರ್‌ಗೆ ರೂ 50 ಏರಿಕೆಯಾಗುವ ನಿರೀಕ್ಷೆ­ಯಿದೆ.

ರೂಪಾಯಿ ಮೌಲ್ಯ ಕುಸಿತ ಮತ್ತು ತೈಲ ಬೆಲೆ ಏರಿಕೆಯ ಕಾರಣ ಸರ್ಕಾರಕ್ಕೆ ದಾಖಲೆಯ ರೂ 1,80,000 ಕೋಟಿ ನಷ್ಟ­ವಾಗಿರುವುದನ್ನು ಸರಿದೂಗಿ­ಸಲು ತೈಲ ಸಚಿವಾಲಯ ಮಾರ್ಗೋ­ಪಾಯ ಹುಡುಕುತ್ತಿರುವ ಹಿನ್ನೆಲೆಯಲ್ಲಿ ಈ ಹೆಚ್ಚಳ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.ಪ್ರತಿಕ್ರಿಯಿಸಿ (+)