ಪೆಟ್ರೋಲ್, ಡೀಸೆಲ್ ತುಟ್ಟಿ

7

ಪೆಟ್ರೋಲ್, ಡೀಸೆಲ್ ತುಟ್ಟಿ

Published:
Updated:
ಪೆಟ್ರೋಲ್, ಡೀಸೆಲ್ ತುಟ್ಟಿ

ನವದೆಹಲಿ/ಬೆಂಗಳೂರು : ಶುಕ್ರವಾರ ಮಧ್ಯರಾತ್ರಿಯಿಂದ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ ರೂ1.50 ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 45 ಪೈಸೆ ಹೆಚ್ಚಿಸಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಕೆಗೆ ಅನುಗುಣವಾಗಿ ಈ ಹೆಚ್ಚಳ ಮಾಡಿರುವುದಾಗಿ ತಿಳಿಸಲಾಗಿದೆ.ಈ ಹೆಚ್ಚಳವು ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ಗಿಂತ ಮುಂಚಿನ ಏರಿಕೆಯಾಗಿದೆ. ಗ್ರಾಹಕರು ತೆರಿಗೆಯನ್ನೂ ಸೇರಿಸಿ ಹಣ ನೀಡಬೇಕಿದ್ದು ವಾಸ್ತವ ಹೆಚ್ಚಳ ಇನ್ನಷ್ಟು ಅಧಿಕವಾಗುತ್ತದೆ.ನಗರದಲ್ಲೂ ಶುಕ್ರವಾರ ಮಧ್ಯ ರಾತ್ರಿ ಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಯಾಗಿದೆ. ನಗರದ ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ರೂ 52.59 ಮತ್ತು ಪೆಟ್ರೋಲ್ ರೂ 75.50  ನಿಗದಿಯಾಗಿದೆ. ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ1.97 ಮತ್ತು ಡೀಸೆಲ್ ಬೆಲೆ 55 ಪೈಸೆಯಷ್ಟು ಏರಿಕೆಯಾಗಿದೆ.ಈ ಹಿಂದೆ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ 73.53 ಮತ್ತು ಡೀಸೆಲ್ ಬೆಲೆ ರೂ 52.04 ರೂಪಾಯಿಗಳಷ್ಟಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry