ಪೆಟ್ರೋಲ್ ದರ ಏರಿಕೆ: ಕಾರಟ್ ಭವಿಷ್ಯ

7

ಪೆಟ್ರೋಲ್ ದರ ಏರಿಕೆ: ಕಾರಟ್ ಭವಿಷ್ಯ

Published:
Updated:

ಪಾಣಿಹತಿ (ಪಿಟಿಐ): ಸಂಸತ್ ಅಧಿವೇಶನ ಮುಗಿದ ನಂತರ ಮೇ ಕೊನೆ ವಾರದಲ್ಲಿ ಕೇಂದ್ರ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ದರ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಭವಿಷ್ಯ ನುಡಿದಿದ್ದಾರೆ. ಸೋಮವಾರ ಇಲ್ಲಿ ಪಕ್ಷದ ರ‌್ಯಾಲಿಯಲ್ಲಿ ಭಾಗವಹಿಸಿದ್ದ ಅವರು, ದರ ಹೆಚ್ಚಳದ ಸೂಚನೆ ನೀಡಿದರು. ತೃಣಮೂಲ ಕಾಂಗ್ರೆಸ್ ಇದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲವೇ? ಎಂಬ ವರದಿಗಾರರ ಪ್ರಶ್ನೆಗೆ, `ಟಿಎಂಸಿ~ ಜತೆ ಸಮಾಲೋಚನೆ ನಡೆಸಿ ನಂತರವೇ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.`ಟಿಎಂಸಿ~ ಸರ್ಕಾರದ ಭಾಗವೆ. ಆದರೆ, ಪ್ರತಿ ಸಲ ಪೆಟ್ರೋಲ್ ಬೆಲೆ ಹೆಚ್ಚಿಸಿದಾಗಲೂ ಸರ್ಕಾರ ತಮ್ಮ ಜತೆ ಸಮಾಲೋಚನೆಯನ್ನೇ ನಡೆಸಿಲ್ಲ ಎಂದು ಸುಮ್ಮನೆ ದೂರುತ್ತಾರೆ ಅಷ್ಟೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry