ಬುಧವಾರ, ಮೇ 25, 2022
30 °C

ಪೆಟ್ರೋಲ್ ದರ ರೂ.1.55 ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪೆಟ್ರೋಲ್ ದರ ಭಾನುವಾರ ಮಧ್ಯರಾತ್ರಿಯಿಂದಲೇ ಪ್ರತಿ ಲೀಟರ್‌ಗೆ ರೂ.1.55 ಏರಿಕೆಯಾಗಿದೆ. ಇದರೊಂದಿಗೆ ಆರು ವಾರಗಳಲ್ಲಿ ಪೆಟ್ರೋಲ್ ದರ ನಾಲ್ಕನೇ ಬಾರಿಗೆ ಏರಿಕೆಯಾದಂತೆ ಆಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಪೆಟ್ರೋಲ್ ದರ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.ಈ ಹೆಚ್ಚಳ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಹೊರತುಪಡಿಸಿ ಆಗಿರುವ ಏರಿಕೆಯಾಗಿದೆ. ಸ್ಥಳೀಯ ತೆರಿಗೆಗೆ ಅನುಸಾರವಾಗಿ ಪೆಟ್ರೋಲ್ ದರ ನಗರದಿಂದ ನಗರಕ್ಕೆ ವ್ಯತ್ಯಾಸವಾಗಲಿದೆ. ಪ್ರಸ್ತುತ ದರ ರೂ.68.58 ಇತ್ತು. ಪೆಟ್ರೋಲ್ ದರ ಜೂ. 1ರಂದು ಲೀಟರ್‌ಗೆ 75 ಪೈಸೆ, ಜೂ. 16ರಂದು ರೂ.2, ಜೂನ್ 29ರಂದು ರೂ.1.82 ಏರಿಕೆಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.