ಗುರುವಾರ , ಮೇ 6, 2021
25 °C

ಪೆಟ್ರೋಲ್ ಬೆಲೆ ಮತ್ತೆ ಏರಿಕೆ: ಎಸ್‌ಯುಸಿಐ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಬಾದ: ಕಳೆದ ಮೂರು ವರ್ಷದ ಅವಧಿಯಲ್ಲಿ ಒಂಭತ್ತನೆ ಬಾರಿಗೆ ಪೆಟ್ರೋಲ್ ಬೆಲೆಯನ್ನು  ಏರಿಸಿರುವ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಕ್ರಮವನ್ನು ಖಂಡಿಸಿ ಪಟ್ಟಣದ ನೆಹರು ವೃತ್ತದಲ್ಲಿ ಭಾನುವಾರ ಎಸ್‌ಯುಸಿಐ(ಸಿ) ಪಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ದಿವಾಕರ್, ಜೀವನಾವಶ್ಯಕ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತೆ ಪೆಟ್ರೋಲ್ ಬೆಲೆ ಏರಿಸುತ್ತಿರುವುದು ಸರಿಯಲ್ಲ. ಇದು ಜನಸಾಮಾನ್ಯರಿಗೆ ಹೊರೆಯಾಗಲಿದೆ. ಇಂಧನದ ಮೇಲೆ ನಿಯಂತ್ರಣ ಹೊಂದದ ಸರ್ಕಾರ ಇಲ್ಲಸಲ್ಲದ ಕುಂಟು ನೆಪವೊಡ್ಡಿ ತೈಲ ಬೆಲೆಗೆ ಕಾರಣವಾಗುತ್ತಿದೆ. ಹೆಚ್ಚಿಸಿರುವ ಬೆಲೆಯನ್ನ ತಕ್ಷಣವೆ ವಾಪಸ ಪಡೆಯುವಂತೆ ಅವರು ಒತ್ತಾಯಿಸಿದರು.ಸ್ಥಳೀಯ ಮುಖಂಡ ಆರ್.ಎಸ್.ಇಬ್ರಾಹಿಂಪೂರ, ಕೇಂದ್ರ ಸರ್ಕಾರದ ಕಾರ್ಯವೈಖರಿ ಜನವಿರೋಧಿ ನೀತಿ ಎಂಬುದು ಸ್ಪಷ್ಟವಾಗುತ್ತದೆ. ತಕ್ಷಣವೆ ಬೆಲೆ ಇಳಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿದರು.ಕೆಲ ಹೊತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ನಂತರ ಪ್ರತಿಕೃತಿ ದಹಿಸಿ,

ಮನವಿ ಸಲ್ಲಿಸದರು. ಸ್ಥಳೀಯ ಸಮಿತಿ ಸದಸ್ಯ ಎಂ.ಜಿ.ರಾಘವೇಂದ್ರ ಅಧ್ಯಕ್ಷತೆವಹಿಸಿದ್ದರು. ವಿವಿಧ ಸಂಘಟನೆಗಳ ಎಸ್.ಎಚ್. ಜಗನ್ನಾಥ , ನಿಂಗಣ್ಣ ಜಂಬಗಿ, ಸಿದ್ದು ಚೌಧರಿ, ಮರಲಿಂಗ, ಲಕ್ಷ್ಮೀಕಾಂತ ಮಾನೆ, ಸೇರಿದಂತೆ ನೂರಾರು ಕಾರ್ಯಕರ್ತ ರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.