ಬುಧವಾರ, ಮಾರ್ಚ್ 3, 2021
19 °C

ಪೆಟ್ರೋಲ್ ಮತ್ತಷ್ಟು ತುಟ್ಟಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೆಟ್ರೋಲ್ ಮತ್ತಷ್ಟು ತುಟ್ಟಿ?

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳು ಪೆಟ್ರೋಲ್ ದರವನ್ನು ಜೂನ್ 16ರಿಂದ ರೂ.0.50ರಷ್ಟು ಹೆಚ್ಚಿಸಲು ನಿರ್ಧರಿಸಿವೆ. ಕಳೆದ ಮೇ 15ರಂದು ಪೆಟ್ರೋಲ್ ದರವನ್ನು ಒಮ್ಮಲೆ ರೂ.5ಹೆಚ್ಚಿಸಲಾಗಿತ್ತು.ಆದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾತೈಲದ ಬೆಲೆಗೆ ಹೋಲಿಸಿದರೆ ಈ ಏರಿಕೆ ತುಂಬಾ ಕಡಿಮೆ ಎಂದು ತೈಲ ಮಾರಾಟ ಕಂಪೆನಿಗಳು ಹೇಳಿವೆ.`ಯಾವುದೇ ರಾಜಕೀಯ ಒತ್ತಡಗಳು ಕಂಡುಬರದಿದ್ದರೆ, ಜೂನ್ 15ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟೋಲ್ ದರವನ್ನು ನಾವು ರೂ. 0.50ರಷ್ಟು ಹೆಚ್ಚಳ ಮಾಡುತ್ತೇವೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ (ಐಒಸಿ) ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.`ಪೆಟ್ರೋಲ್ ದರವನ್ನು ರೂ. 5 ಹೆಚ್ಚಿಸಿದ ನಂತರವೂ, ಪ್ರತಿ ಲೀಟರ್ ಪೆಟ್ರೋಲ್ ಮಾರಾಟದ ಮೇಲೆ ರೂ. 4.58 ನಷ್ಟವಾಗುತ್ತಿದೆ. ದೆಹಲಿಯಲ್ಲಿ ಚಿಲ್ಲರೆ ಮಾರಾಟದ ಮೇಲೆ ರೂ. 5.50 ನಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.ಮೇ ತಿಂಗಳ ಮೊದಲ ಪಾಕ್ಷಿಕ ಅವಧಿಯ ಕಚ್ಚಾತೈಲದ ಸರಾಸರಿ ಬೆಲೆ ಆಧರಿಸಿ ಪೆಟ್ರೋಲ್ ದರ ಏರಿಕೆ ಮಾಡಲಾಗಿದೆ. ಆದರೆ, ಜೂನ್ 1ರಿಂದ ಮತ್ತೆ ಕಚ್ಚಾತೈಲದ ಬೆಲೆಯಲ್ಲಿ ವ್ಯತ್ಯಾಸವಾಗಿದೆ. ಪೆಟ್ರೋಲ್ ದರವನ್ನು ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸಿದ ನಂತರ, ಸರ್ಕಾರ ತೈಲ ಮಾರಾಟ ಕಂಪೆನಿಗಳಿಗೆ ನಷ್ಟ ಭರ್ತಿಗಾಗಿ ಯಾವುದೇ ಹಣಕಾಸಿನ ನೆರವು ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ದರ ಏರಿಕೆ ಅನಿವಾರ್ಯ ಎಂದು ಅವರು ಹೇಳಿದರು.ಕಚ್ಚಾ ತೈಲದ ಆಮದು ಬೆಲೆಗಿಂತ ಕಡಿವೆು ದರದಲ್ಲಿ ತೈಲ ಮಾರಾಟ ಮಾಡುತ್ತಿರುವುದರಿಂದ ಸರ್ಕಾರಿ ಸ್ವಾಮ್ಯದ ಮೂರು ತೈಲ ಮಾರಾಟ ಕಂಪೆನಿಗಳು 2011-12ನೇ ಸಾಲಿನಲ್ಲಿ ಒಟ್ಟು ರೂ.1,60,568 ಕೋಟಿ ನಷ್ಟ ಅನುಭವಿಸುತ್ತವೆ ಎಂದು ಅಂದಾಜಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.