ಸೋಮವಾರ, ನವೆಂಬರ್ 18, 2019
28 °C

ಪೆಟ್ರೋಲ್ ಮತ್ತೆ ಅಗ್ಗ

Published:
Updated:

ನವದೆಹಲಿ (ಪಿಟಿಐ): ಪೆಟ್ರೋಲ್ ಮತ್ತೆ ಅಗ್ಗವಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ದರ ಒಂದು ರೂಪಾಯಿ ಇಳಿದಿದೆ. ಪರಿಷ್ಕೃತ ದರ ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.ಒಂದು ತಿಂಗಳ ಅವಧಿಯಲ್ಲಿ ಪೆಟ್ರೋಲ್ ದರದಲ್ಲಿ ಇಳಿಕೆಯಾಗುತ್ತಿರುವುದು ಇದು  ಮೂರನೇ ಬಾರಿ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ  ತೈಲ ಬೆಲೆಯಲ್ಲಿ ಇಳಿಕೆಯಾಗಿರುವುದೇ ದರ ಕಡಿತಕ್ಕೆ ಕಾರಣ.ಪರಿಷ್ಕೃತಗೊಂಡಿರುವ ದರದ ಪ್ರಕಾರ, ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ1.20ರಷ್ಟು ಕುಗ್ಗಲಿದೆ. ಪ್ರತಿ ಲೀಟರ್ ಪೆಟ್ರೋಲ್ ದರ   ್ಙ66.09 (ವ್ಯಾಟ್ ಸೇರಿ) ಆಗಲಿದೆ.

ಪ್ರತಿಕ್ರಿಯಿಸಿ (+)