ಪೆಟ್ರೋಲ್ ಸ್ವಲ್ಪ ಅಗ್ಗ

7

ಪೆಟ್ರೋಲ್ ಸ್ವಲ್ಪ ಅಗ್ಗ

Published:
Updated:

ನವದೆಹಲಿ (ಪಿಟಿಐ): ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಸಿಕೊಂಡಿರುವುದರಿಂದ ಪೆಟ್ರೋಲ್ ಬೆಲೆ ಸ್ವಲ್ಪ ಅಗ್ಗವಾಗಿದೆ. ಪ್ರತಿ ಲೀಟರ್  ಪೆಟ್ರೋಲ್ ಬೆಲೆಯಲ್ಲಿ 56 ಪೈಸೆ ಕಡಿಮೆಯಾಗಿದ್ದು ಸೋಮವಾರ ಮಧ್ಯ ರಾತ್ರಿಯಿಂದಲೇ ಹೊಸ ದರ ಜಾರಿಯಲ್ಲಿ ಬಂದಿದೆ.ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ರೂ 68.46ರಿಂದ ರೂ 67.90 ಕ್ಕೆ ಇಳಿದಿದೆ.

ಹೊಸ ದರದ ವಿವರ: ಮುಂಬೈ- ರೂ 74.43, ಕೋಲ್ಕತ್ತ ರೂ 75.44, ಚೆನ್ನೈ ರೂ 71.48.

ಕಳೆದ ಜೂನ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 70 ಪೈಸೆ ಹೆಚ್ಚಿಸಲಾಗಿತ್ತು.ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಸಿಕೊಂಡಿದ್ದರೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಸ್ಥಿರವಾಗಿದೆ. ತೈಲ ಬೆಲೆ ಮತ್ತು ವಿನಿಮಯ ದರ ಪದೇ ಪದೇ ಬದಲಾಗುವುದರಿಂದ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಆಗಾಗ ಏರಿಳಿತವಾಗುತ್ತದೆ ಎಂದು ಭಾರತೀಯ ತೈಲ ಕಂಪೆನಿಗಳ ಮೂಲಗಳು ತಿಳಿಸಿವೆ.ಮಾರುಕಟ್ಟೆ ಸ್ಥಿತಿಗತಿಗೆ ತಕ್ಕಂತೆ ಚಿಲ್ಲರೆ ತೈಲ ಬೆಲೆ ಮಾರಾಟದಲ್ಲಿ ಹೆಚ್ಚಳ ಮಾಡಲು ಸಾಧ್ಯವಾಗದೆ ಇದ್ದುದರಿಂದ ಸರ್ಕಾರಿ ಸ್ವಾಮ್ಯದ ನಾಲ್ಕು ತೈಲ ಕಂಪೆನಿಗಳು ಪೆಟ್ರೋಲ್ ಮಾರಾಟದಿಂದ ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ 2600 ಕೋಟಿ ನಷ್ಟ ಅನುಭವಿಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry