ಪೆಟ್‌ಗಳ ಬ್ರೇಕ್‌ಫಾಸ್ಟ್

7

ಪೆಟ್‌ಗಳ ಬ್ರೇಕ್‌ಫಾಸ್ಟ್

Published:
Updated:

ಸಾಕುಪ್ರಾಣಿ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ. ಈ ಭಾನುವಾರದ ಮುಂಜಾನೆಯಲ್ಲಿ ನಿಮ್ಮ ಮೆಚ್ಚಿನ ಸಾಕುಪ್ರಾಣಿಯೊಂದಿಗೆ ಉಪಹಾರ ಸೇವಿಸಲು `ಅಂಡರ್ ದಿ ಮ್ಯಾಂಗೋ ಟ್ರೀ~ ಅವಕಾಶ ಕಲ್ಪಿಸಿದೆ.

 

ನಿಮ್ಮ ಮುದ್ದಿನ ಪ್ರಾಣಿಗೆ ಇಷ್ಟವಾದ ವಿಶೇಷ ತಿಂಡಿಯನ್ನು ತಿನ್ನಿಸಲು ಇಲ್ಲಿ ಸಾಧ್ಯವಿದೆ. ಅದಕ್ಕೆ ನೀವು ಮಾಡಬೇಕಾದ್ದಿಷ್ಟೇ, ಆ ಮುಂಜಾನೆ ರೂ.250ನ್ನು ಪಾವತಿಸಿ ನಿಮ್ಮ ಮೆಚ್ಚಿನ ಪ್ರಾಣಿಯನ್ನು ರಿಚ್ಮಂಡ್ ಟೌನ್‌ನ ಪೆಟ್ಸ್ ಕೆಫೆಗೆ ಕರೆತರಬೇಕು.ಅಲ್ಲಿ ಪ್ರಾಣಿಗಳಿಗೆಂದೇ ತಯಾರಾದ ಡಾಗ್ಗೀ ಪ್ಲಾಟರ್ ಲಭ್ಯ. ಇದರಲ್ಲಿ ಸ್ಟೀಮ್ಡ ಚಿಕನ್, ರಾಗಿ ಬಾಲ್, ಮೈನ್ಸ್ ಮೀಟ್ ಬಾಲ್, ಬಿಸ್ಕತ್ ಹಾಗೂ ಹಾಲು ದೊರೆಯಲಿದೆ. ಒಂದು ವೇಳೆ ನಿಮ್ಮ ಸಾಕು ಪ್ರಾಣಿ ಸಸ್ಯಹಾರಿಯಾಗಿದ್ದಲ್ಲಿ ಅದಕ್ಕೂ ತಿನಿಸುಗಳು ದೊರೆಯಲಿವೆ.ಬಿಡುವಿನ ದಿನದ ಮುಂಜಾನೆಯನ್ನು ವಿಶಿಷ್ಟವಾಗಿ ಕಳೆಯುವ ಅಭಿಲಾಷೆಯಿದ್ದರೆ, ನಂ3, ಲಾರೆಲ್ ಲೇನ್, ರಿಚ್‌ಮಂಡ್ ಟೌನ್‌ಗೆ ಬೆಳಿಗ್ಗೆ 9ಗಂಟೆಗೆ ಭೇಟಿ ನೀಡಬಹುದು. ಮಾಹಿತಿಗೆ 9686601021.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry