ಮಂಗಳವಾರ, ಜೂನ್ 22, 2021
27 °C

ಪೆಪ್ಸಿಗೆ ಹೊಸ ಮುಖ್ಯಸ್ಥರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಜಾಗತಿಕ ಆಹಾರ ಮತ್ತು ತಂಪುಪಾನೀಯ ಕಂಪೆನಿ ಪೆಪ್ಸಿ ತನ್ನ ಆಡಳಿತದಲ್ಲಿ ಭಾರಿ ಬದಲಾವಣೆ ತರಲು ಚಿಂತನೆ ನಡೆಸಿದ್ದು, ಪ್ರಸ್ತುತ ಕಂಪೆನಿಯ ಮುಖ್ಯಸ್ಥರಾಗಿರುವ ಭಾರತೀಯ ಮೂಲದ ಇಂದ್ರಾ ನೂಯಿ ಉತ್ತರಾಧಿಕಾರಿ ಸ್ಥಾನಕ್ಕೆ ಪ್ರಮುಖ ಮೂವರು ಸಂಭಾವ್ಯ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ.ವಾಲ್‌ಮಾರ್ಟ್ ಸ್ಟೋರ್ಸ್ ಇಂಕ್‌ನ ಕಾರ್ಯನಿರ್ವಾಹಕ ಅಧಿಕಾರಿ ಬ್ರಿಯಾನ್ ಕಾರ್ನ್‌ವೆಲ್ ಅವರು ಕಂಪೆನಿಯ ಅಮೆರಿಕ ಆಹಾರ ವಿಭಾಗದ ಮುಖ್ಯಸ್ಥರಾಗಲಿದ್ದಾರೆ. ಸುದೀರ್ಘ ಅವಧಿಯಲ್ಲಿ ಕಂಪೆನಿ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಜಾನ್ ಕಾಂಪ್ಟನ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದು `ವಾಲ್‌ಸ್ಟ್ರೀಟ್ ಜನರಲ್~ ವರದಿ ಮಾಡಿದೆ.ಇವರಲ್ಲದೇ, ಕಂಪೆನಿಯ ಐರೋಪ್ಯ ಕಾರ್ಯಾಚರಣೆಯ ಮುಖ್ಯಸ್ಥರಾಗಿರುವ ಜೆನ್ ಅಬ್ದುಲ್ಲಾ ಅವರನ್ನೂ ಪ್ರಮುಖ ಹುದ್ದೆಗೆ ನೇಮಕ ಮಾಡುವ ಚಿಂತನೆ ನಡೆದಿದೆ. ಈ ಮೂವರಲ್ಲಿ ಒಬ್ಬರು ಇಂದಿರಾ ನೂಯಿ ಅವರ ಉತ್ತರಾಧಿಕಾರಿಯಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಈ ಎಲ್ಲಾ ಅಧಿಕಾರಿಗಳನ್ನು ಯಾವ ದಿನಾಂಕದಿಂದ ನೇಮಕ ಮಾಡಲಾಗುತ್ತದೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.