ಸೋಮವಾರ, ಜೂನ್ 21, 2021
23 °C

ಪೆಪ್ಸಿ ಟಿ20 ನೋಂದಣಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೆಪ್ಸಿ ಟಿ20 ನೋಂದಣಿ ಆರಂಭ

`ಚೇಂಜ್ ದಿ ಗೇಮ್~ ಎಂದು ಫುಟ್‌ಬಾಲ್ ಪ್ರಚಾರಾಂದೋಲನದಲ್ಲಿ ತೊಡಗಿಕೊಂಡಿರುವ ಪೆಪ್ಸಿ ಈ ಕ್ರೀಡೆಯ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಲು `ಪೆಪ್ಸಿ ಟಿ20 ಫುಟ್‌ಬಾಲ್ ಲೀಗ್~ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.ಏಳು ಮಂದಿಯನ್ನೊಳಗೊಂಡ ತಂಡ, 20 ನಿಮಿಷದ ಕಾಲಾವಧಿ ಮತ್ತು ಕೆಲವು ನಿಯಮಗಳ ಪ್ರಕಾರ ಸ್ಪರ್ಧೆ ನಡೆಯಲಿದ್ದು, ಬೆಂಗಳೂರಿನಲ್ಲಿ ಫುಟ್‌ಬಾಲ್ ಲೀಗ್‌ಗೆ ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ.ಮಾರ್ಚ್ 21ರಿಂದ ಮಾರ್ಚ್ 27ರವರೆಗೆ ನೋಂದಣಿಗೆ ಅವಕಾಶವಿದ್ದು, 14ರಿಂದ 30 ವಯೋಮಿತಿಯೊಳಗಿನ ಹವ್ಯಾಸಿ ಫುಟ್‌ಬಾಲ್ ಪಟುಗಳು ನಿಗದಿಪಡಿಸಿದ ಸ್ಥಳಗಳಲ್ಲಿ ಏಳು ಸದಸ್ಯರ ತಂಡದೊಂದಿಗೆ ನೋಂದಣಿ ಮಾಡಿಕೊಳ್ಳಬಹುದು. ಬ್ರಿಗೇಡ್ ರಸ್ತೆ, ಎನ್.ಆರ್.ಕಾಲೋನಿ ಇನ್ನೂ ಹಲವೆಡೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.ಬೆಂಗಳೂರು, ಚೆನ್ನೈ, ಕೊಲ್ಕತ್ತಾ, ಮುಂಬೈ, ಲಖನೌ, ಲೂಧಿಯಾನ ಮತ್ತು ದೆಹಲಿಯಲ್ಲಿ ನೋಂದಣಿ ಮತ್ತು ಪಂದ್ಯಗಳು ನಡೆಯುತ್ತವೆ. ಪ್ರತಿ ನಗರದ 64 ತಂಡಗಳು ನಾಕೌಟ್ ಶೈಲಿಯ 20 ನಿಮಿಷದ ಪಂದ್ಯಗಳಲ್ಲಿ ಸ್ಪರ್ಧಿಸುತ್ತವೆ. ಶ್ರೇಷ್ಠ 32 ತಂಡಗಳು ಆಯಾ ನಗರದ ಫೈನಲ್ಸ್‌ನಲ್ಲಿ ಭಾಗವಹಿಸುತ್ತವೆ.

 

ಪ್ರತಿ ನಗರದಿಂದ ಒಂದು ವಿಜೇತ ತಂಡ ಸೇರಿ ಒಟ್ಟು ಎಂಟು ತಂಡಗಳು ಮತ್ತು ವೈಲ್ಡ್‌ಕಾರ್ಡ್ ಎಂಟ್ರಿ ತಂಡ `ಗೇಮ್ ಚೇಂಜರ್ಸ್‌~  ಆಗಲು ಸ್ಪರ್ಧಿಸುತ್ತಾರೆ. ಅವರು ಗ್ರಾಂಡ್ ಫೈನಲ್‌ನಲ್ಲಿ ಭಾರತದ ಕ್ರಿಕೆಟ್ ಆಟಗಾರರನ್ನು ಎದುರಿಸುವ ಮುನ್ನ ಅಂತರರಾಷ್ಟ್ರೀಯ ಫುಟ್‌ಬಾಲ್ ತರಬೇತಿದಾರರಿಂದ ಮಾರ್ಗದರ್ಶನ ನೀಡಲಾಗುತ್ತದೆ.ಪೆಪ್ಸಿ ಟಿ20 ಫುಟ್‌ಬಾಲ್ ಕುರಿತು ಹೆಚ್ಚಿನ ವಿವರಗಳಿಗೆ, ಭಾಗವಹಿಸಲು, ನೀತಿ ಮತ್ತು ನಿಯಮಗಳಿಗೆ, ನೋಂದಣಿ ದಿನಾಂಕ ಮತ್ತು ಸ್ಥಳವನ್ನು ತಿಳಿಯಲು www.facebook.com/pepsiindia or www.pepsichangethegame.com ಇಲ್ಲಿ ಲಾಗಾನ್ ಆಗಿರಿ ಅಥವಾ 08888866666 ಕರೆ ಮಾಡಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.