ಸೋಮವಾರ, ಜನವರಿ 20, 2020
20 °C

ಪೆಶಾವರಕ್ಕೆ ಹೋಗುವ ಆಸೆ: ಶಾರುಖ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬಾಲಿವುಡ್‌ ಬಾದಶಾ ಶಾರುಖ್‌ ಖಾನ್‌ ತನ್ನ ಮಕ್ಕ ಳಾದ ಆರ್ಯನ್‌, ಸುಹಾನಾ ಮತ್ತು ಅಬ್ರಾಂ ಅವರನ್ನು ತಮ್ಮ ಕುಟುಂಬದ ಮೂಲ ಸ್ಥಾನವಾದ ಪಾಕಿಸ್ತಾನದ ಪೆಶಾವರಕ್ಕೆ  ಕರೆದೊ­ಯ್ಯಲು ಬಯಸಿದ್ದಾರೆ.ಪಾಕಿಸ್ತಾನದ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖರ್‌  ತಮ್ಮ ದೇಶಕ್ಕೆ ಭೇಟಿ ನೀಡುವಂತೆ ನೀಡಿದ ಆಹ್ವಾನವನ್ನು ನಿರಾಕರಿಸಿದ ಅವರು ಚಿಕ್ಕವನಿದ್ದಾಗ ತಂದೆಯೊಡನೆ ಹೋಗಿದ್ದ ಆ ಸ್ಥಳಕ್ಕೆ ಮತ್ತೆ ಹೋಗಲು ಇಷ್ಟ­ಪಡುತ್ತೇನೆ ಎಂದು  ಹೇಳಿದ್ದಾರೆ.‘ನನ್ನ ಕುಟುಂಬದ ಮೂಲ ಪೆಶಾವರ­. ಕೆಲವು ಸದಸ್ಯರು ಇನ್ನೂ ಅಲ್ಲಿ ವಾಸವಾಗಿದ್ದಾರೆ. ನಾನು 15ವರ್ಷದ­ವನಾಗಿದ್ದಾಗ ನನ್ನ ತಂದೆ ನನ್ನನ್ನು ಅಲ್ಲಿಗೆ ಕರೆದೊಯ್ದಿದ್ದರು.ಪೆಶಾವರ, ಕರಾಚಿ ಮತ್ತು ಲಾಹೋರ್‌­­ದಲ್ಲಿ ತಂದೆಯೊಂದಿಗೆ ಕಳೆದ ದಿನಗಳ ಕುರಿತು ನನಗಿನ್ನೂ ಕೆಲವು ಅದ್ಭುತವಾದ ನೆನಪುಗಳಿವೆ. ಆ ಸ್ಥಳ­ಗಳನ್ನು ನನ್ನ ಮಕ್ಕಳಿಗೂ ತೋರಿಸಬೇಕು ಎಂಬ ಆಸೆ ನನಗಿದೆ’ ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)