ಪೇಜಾವರ ಸದಾಶಿವರಾಯರ ಸ್ಮರಣೆ

7

ಪೇಜಾವರ ಸದಾಶಿವರಾಯರ ಸ್ಮರಣೆ

Published:
Updated:

ಬೆಂಗಳೂರು: `ಪೇಜಾವರ ಸದಾಶಿವರಾಯರು ತಮ್ಮ ಗದ್ಯ, ಪದ್ಯ, ನಾಟಕಗಳಲ್ಲಿ ವಿಶಿಷ್ಟ ಛಾಪು ಮೂಡಿಸಿ ಇಂದಿಗೂ ಜನಜನಿತವಾಗಿದ್ದಾರೆ' ಎಂದು ವಿಮರ್ಶಕ ಎಸ್.ಆರ್.ವಿಜಯಶಂಕರ ಹೇಳಿದರು.ಸುಚಿತ್ರ ಕಲಾಕೇಂದ್ರದಲ್ಲಿ ಶನಿವಾರ ನಡೆದ ಪೇಜಾವರ ಸದಾಶಿವರಾಯರ ಜನ್ಮ ಶತಮಾನೋತ್ಸವದಲ್ಲಿ ಅವರು ಮಾತನಾಡಿದರು.`ಅವರು ಬದುಕಿದ್ದು 27 ವರ್ಷಗಳಾದರೂ, ವಿಶಿಷ್ಟ ಪ್ರಯೋಗಕ್ಕೆ ಒಡ್ಡಿಕೊಂಡಿದ್ದ ಅವರ ಕಾವ್ಯಗಳು ಇಂದಿಗೂ ತನ್ನ ಆಸಕ್ತಿಯನ್ನು ಉಳಿಸಿಕೊಂಡಿವೆ. ಅವರ ಕಾವ್ಯ, ಗದ್ಯ ಮತ್ತು ನಾಟಕಗಳು ಇಂದಿಗೂ ಪ್ರಸ್ತುತವಾಗಿವೆ' ಎಂದರು.ಲೇಖಕ ಡಾ.ನಾ. ದಾಮೋದರ ಶೆಟ್ಟಿ ಅವರು ಮಾತನಾಡಿ, `ಏಕೀಕರಣದ ಪರಿಕಲ್ಪನೆ ಸದಾಶಿವರಾಯರ ಕೃತಿಗಳಲ್ಲಿ ಆಗಲೇ ವ್ಯಕ್ತವಾಗಿತ್ತು. ಅವರ ಬೀದಿಗೆ ಇಳಿದ ನಾರಿ ನಾಟಕವು ಗ್ರಾಮೀಣ ಮತ್ತು ನಗರ ಸಂಸ್ಕೃತಿಯ ಘರ್ಷಣೆಗಳನ್ನು ಬಿಂಬಿಸುತ್ತದೆ' ಎಂದು ಹೇಳಿದರು.`ದಕ್ಷಿಣ ಕನ್ನಡ  ಜಿಲ್ಲೆಯ ವಿಶಿಷ್ಟ ಭಾಷಾ ಸೊಗಡು ಅವರ ನಾಟಕ ಮತ್ತು ಗದ್ಯಗಳಲ್ಲಿ ಕಂಡುಬರುತ್ತವೆ. ಇದರಿಂದಲೇ ವಿಶಿಷ್ಟವಾದ ಸೊಗಡನ್ನು ಹೊಂದಿರುವ ಅವರ ಕೃತಿಗಳು   ಜನರನ್ನು ಇಂದಿಗೂ ಹಿಡಿದಿಡುತ್ತವೆ' ಎಂದು ಅವರು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry