ಭಾನುವಾರ, ಏಪ್ರಿಲ್ 18, 2021
33 °C

ಪೇಜ್‌ನ ಮಾಜಿ ಪ್ರೇಯಸಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಕ್ ಕ್ರೀಕ್/ವಾಷಿಂಗ್ಟನ್ (ಪಿಟಿಐ): ವಿಸ್ಕಾನ್ಸಿನ್ ಗುರುದ್ವಾರದಲ್ಲಿ ಆರು ಜನ ಸಿಖ್ಖರನ್ನು ಬಲಿ ತೆಗೆದುಕೊಂಡ ಹಂತಕ  ವೇಡ್ ಮೈಕೇಲ್ ಪೇಜ್‌ನ ಮಾಜಿ ಪ್ರೇಯಸಿಯನ್ನು ಬುಧವಾರ ಬಂಧಿಸಿರುವ ಪೊಲೀಸರು ಆಕೆಯ ಮನೆಯಿಂದ ಆಯುಧವೊಂದನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಈ ನವ ನಾಜಿ ಇಂತಹ ಹತ್ಯಾಕಾಂಡಕ್ಕೆ ಇಳಿಯಲು ಪ್ರೇರಣೆ ನೀಡಿದ ಅಂಶವಾದರೂ ಯಾವುದು  ಎಂಬುದು ಈತನಕ ತಿಳಿದುಬಂದಿಲ್ಲ.ನರ್ಸಿಂಗ್ ವಿದ್ಯಾರ್ಥಿನಿಯಾಗಿರುವ ಮಿಸ್ಟಿ ಕುಕ್ ಎಂಬಾಕೆಯನ್ನು ತನಿಖೆ ನಡೆಸುತ್ತಿರುವ ಪೊಲೀಸರು ಬಂಧಿಸಿದ್ದು, 2002ರಲ್ಲಿ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರಿಂದ ತಪ್ಪಿಸಿಕೊಂಡು ಹೋದ ಆರೋಪ ಈಕೆಯ ಮೇಲಿದೆ. ಈಕೆ ಸಹ ಬಿಳಿಯರ ಶ್ರೇಷ್ಠತಾವಾದದ ಚಳವಳಿ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾಳೆ. ಆರೋಪಿ ಸ್ಥಾನದಲ್ಲಿರುವ ಕುಕ್ ಆಯುಧ ಇಟ್ಟುಕೊಳ್ಳುವುದು ಅಪರಾಧವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯಲ್ಲಿ ಪೇಜ್ ಮೃತಪಟ್ಟಿರಬಹುದು. ಆದರೆ ಬಿಳಿಯರ ಶ್ರೇಷ್ಠತಾವಾದದ ಚಳವಳಿಕಾರರ ಭಯದಲ್ಲೇ ಸಿಖ್ಖ ಸಮುದಾಯ ಬದುಕುವಂತಾಗಿದೆ ಎಂದು ಸಿಎನ್‌ಎನ್ ಸುದ್ದಿಸಂಸ್ಥೆ ವರದಿಮಾಡಿದೆ.ಗುಪ್ತ ಸಂಕೇತ:  ಗುರುದ್ವಾರದಲ್ಲಿ ಆರು ಜನ ಸಿಖ್‌ರನ್ನು ಗುಂಡಿಕ್ಕಿ ಕೊಂದ ಮಾಜಿ ಸೈನಿಕ ವೇಡ್ ಮೈಕೇಲ್ ಪೇಜ್ ತನ್ನ ದೇಹದಲ್ಲಿ ಹಾಕಿಸಿಕೊಂಡಿದ್ದ ಹಚ್ಚೆಯಲ್ಲಿ  ಬಿಳಿಯರ ಶ್ರೇಷ್ಠತಾವಾದ ಪ್ರತಿನಿಧಿಸುವ  ಗುಪ್ತ ಸಂಕೇತಗಳಿದ್ದವು ಎನ್ನಲಾಗಿದೆ.ನಿರುಪಮಾ ಸಾಂತ್ವನ: ವಿಸ್ಕಾನ್ಸಿನ್ ಗುರುದ್ವಾರದ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟ ಕುಟುಂಬದವರನ್ನು ಬುಧವಾರ ಭೇಟಿ ಮಾಡಿದ ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿರುವ ನಿರುಪಮಾ ರಾವ್ ಸಾಂತ್ವನ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.