ಪೈಪ್‌ಗಳಿಗೆ ಬೆಂಕಿ: ಅಪಾರ ಹಾನಿ

7

ಪೈಪ್‌ಗಳಿಗೆ ಬೆಂಕಿ: ಅಪಾರ ಹಾನಿ

Published:
Updated:

ಬನಹಟ್ಟಿ: ಇಲ್ಲಿಯ ಕುಡಿಯುವ ನೀರಿನ ಯೋಜನೆಗಾಗಿ ಗುತ್ತಿಗೆದಾರರು ಸಂಗ್ರಹಿಸಿಟ್ಟಿದ್ದ ಪಿವಿಸಿ ಪೈಪ್‌ಗಳಿಗೆ ಸೋಮವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ.ನಗರದ ನೀರಿನ ಟ್ಯಾಂಕ್ ಬಳಿ ಸಂಗ್ರಹಿಸಿಡಲಾಗಿದ್ದ ಪೈಪುಗಳು ಸುಟ್ಟು ಸುಮಾರು 4 ಕೋಟಿ ರೂ. ಹಾನಿ ಯಾಗಿದೆ ಎಂದು ಅಂದಾಜಿಸಲಾಗಿದೆ. ಬೆಂಕಿ ಹತ್ತಿದ ಸ್ವಲ್ಪೇ ಹೊತ್ತಿನಲ್ಲಿ ಆಕಾಶದೆತ್ತರಕ್ಕೆ ಬೆಂಕಿ ಜ್ವಾಲೆಗಳೆದ್ದು, ದಟ್ಟ ಹೊಗೆ ಚಿಮ್ಮಲಾರಂಭಿಸಿತು. ಪಕ್ಕದಲ್ಲಿರುವ ಎರಡು-ಮೂರು ಮನೆಗಳಿಗೆ ಬೆಂಕಿ ತಗುಲಿದ್ದು, ಯಾವುದೇ ಪ್ರಾಣಾಪಾಯವಾಗಿಲ್ಲ. ಬೆಂಕಿ ಆಕಸ್ಮಿಕಕ್ಕೆ ಕಾರಣ ತಿಳಿದುಬಂದಿಲ್ಲ.ಬೆಂಕಿ ದುರ್ಘಟನೆ ಕುರಿತು ಜಮಖಂಡಿಯ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದರೂ ಸುಮಾರು ಒಂದು ತಾಸಿನ ನಂತರ ಅಗ್ನಿಶಾಮಕ ದಳ ಆಗಮಿಸಿದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry