ಬುಧವಾರ, ನವೆಂಬರ್ 13, 2019
21 °C

ಪೈಪ್‌ಲೈನ್ ಸಿಡಿದು ಸಾವು

Published:
Updated:

ಮುಂಬೈ (ಪಿಟಿಐ): ನೆಲದಡಿ ಅಳವಡಿಸಿದ್ದ ನೀರಿನ ಪೈಪ್‌ಲೈನ್ ಸಿಡಿದ ಪರಿಣಾಮ ಒಬ್ಬ ಮೃತಪಟ್ಟು, ಎಂಟು ಜನರು ಗಾಯಗೊಂಡಿರುವ ಘಟನೆ ಮುಂಬೈನ ಗೋವಿಂದ ಉಪನಗರದ ಸಂಜೀವಿನ ಸೊಸೈಟಿಯ ಬಳಿ ಸೋಮವಾರ ಬೆಳಗಿನ ಜಾವ 3.30ರ ವೇಳೆಯಲ್ಲಿ ನಡೆದಿದೆ.ಮೃತನನ್ನು ಡಿ.ಹಜಾರಿ (60) ಎಂದು ಗುರುತಿಸಲಾಗಿದ್ದು, ಈತ ಸಂಜೀವಿನ ಹೌಸಿಂಗ್ ಸೊಸೈಟಿಯ ನೆಲಮಹಡಿಯಲ್ಲಿ ವಾಸವಾಗಿದ್ದ. ಈ ಅವಘಡ ನಡೆದ ವೇಳೆ ನೆಲಮಹಡಿಯ ಜನರು ನಿದ್ರಾವಸ್ಥೆಯಲ್ಲಿದ್ದರು.

ಪ್ರತಿಕ್ರಿಯಿಸಿ (+)