ಪೈಲಟ್‌ಗಳಿಗೆ ಸಕಾಲದಲ್ಲಿ ವೇತನ ಪಾವತಿ

7

ಪೈಲಟ್‌ಗಳಿಗೆ ಸಕಾಲದಲ್ಲಿ ವೇತನ ಪಾವತಿ

Published:
Updated:

ನವದೆಹಲಿ (ಪಿಟಿಐ): ಸಕಾಲಕ್ಕೆ ವೇತನ ನೀಡುತ್ತಿಲ್ಲ ಎಂಬ ಏರ್ ಇಂಡಿಯಾ ಪೈಲಟ್‌ಗಳ ವಾದವನ್ನು ತಳ್ಳಿಹಾಕಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಅವರು, ಸರ್ಕಾರವು ಪೈಲಟ್‌ಗಳಿಗೆ ವೇತನವನ್ನು ಸಕಾಲದಲ್ಲಿಯೇ ಪಾವತಿಸುತ್ತಿದೆ ಎಂದು ಹೇಳಿದ್ದಾರೆ.ವೇತನ ನೀಡುವುದು ಕೆಲ ತಿಂಗಳು ತಡವಾಗಿರಬಹುದು, ಆದರೆ ಕಳೆದ ಐದಾರು ತಿಂಗಳಿನಿಂದ ನಿಗದಿತ ಸಮಯದಲ್ಲಿಯೇ ವೇತನ ನೀಡಲಾಗಿದೆ. ಪೈಲಟ್‌ಗಳಿಗೆ ನೀಡಬೇಕಾಗಿದ್ದ ಉಳಿಕೆ ವೇತನವನ್ನು ಆಗಸ್ಟ್‌ನಲ್ಲಿಯೇ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಭಾರತೀಯ ವಾಣಿಜ್ಯ ಪೈಲಟ್‌ಗಳ ಸಂಘ (ಐಸಿಪಿಎ)ವು ಎತ್ತಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸಚಿವರು, ವೇತನವನ್ನು ಸಕಾಲದಲ್ಲಿ ಪಾವತಿಸಲಾಗುತ್ತಿದೆ ಎಂದಿದ್ದಾರೆ.ವೇತನ, ವಿಮಾನಯಾನ ಭತ್ಯೆಯನ್ನು ಸಕಾಲಕ್ಕೆ ನೀಡದಿರುವ ಬಗ್ಗೆ ಪ್ರಸ್ತಾಪಿಸಿ ಐಸಿಪಿಎ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಪ್ರವೀಣ್ ಕೀರ್ತಿ ಅವರು ಸಚಿವರಿಗೆ ಪತ್ರ ಬರೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry