ಪೈಲಟ್‌ಗಾಗಿ ಮುಂದುವರಿದ ಹುಡುಕಾಟ

7

ಪೈಲಟ್‌ಗಾಗಿ ಮುಂದುವರಿದ ಹುಡುಕಾಟ

Published:
Updated:

ಶಿಮ್ಲಾ (ಐಎಎನ್‌ಎಸ್): ಹಿಮಾಲಯದ ಹಿಮಚ್ಛಾದಿತ ಶಿಖರದಲ್ಲಿ ಅಪಘಾತಕ್ಕೆ ಒಳಗಾಗಿದ್ದ ಮಿಗ್-29 ವಿಮಾನದ ಪೈಲಟ್ ಡಿ.ಎಸ್. ತೋಮರ್ ಪತ್ತೆ ಕಾರ್ಯಕ್ಕೆ ಶುಕ್ರವಾರ ಭಾರಿ ಗಾಳಿ ಮತ್ತು ಹಿಮಪಾತ ಅಡ್ಡಿಯಾಗಿದೆ.ಹತ್ತು ದಿನಗಳ ಬಳಿಕ ಭಾರತೀಯ ವಾಯು ಪಡೆ ಗುರುವಾರ ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚಿದ್ದು. ಪೈಲಟ್ ಬಗ್ಗೆ ಯಾವುದೇ ಸುಳಿವು  ದೊರೆತಿರಲಿಲ್ಲ. ಪೈಲಟ್ ತೋಮರ್ ಚಲಾಯಿಸುತ್ತಿದ್ದ ವಿಮಾನವು 18ರಂದು ಹಿಮಾಲಯ ಪರ್ವತ ಪ್ರದೇಶದಲ್ಲಿ ಕಣ್ಮರೆಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry