ಮಂಗಳವಾರ, ಅಕ್ಟೋಬರ್ 22, 2019
22 °C

ಪೊಂಗಲ್

Published:
Updated:

ಸಿಹಿ ಪೊಂಗಲ್

ಬೇಕಾಗುವ ಸಾಮಾನು
: ಹೆಸರು ಬೇಳೆ ಒಂದು ಕಪ್, ಅಕ್ಕಿ ಒಂದು ಕಪ್, ಕಾಯಿತುರಿ ಒಂದು ಕಪ್,  ಬೆಲ್ಲ ಒಂದು ಅಚ್ಚು, ತುಪ್ಪ, ಏಲಕ್ಕಿ, ದ್ರಾಕ್ಷಿ, ಗೋಡಂಬಿ, ಅರಿಸಿಣ

ಮಾಡುವ ವಿಧಾನ: ಹೆಸರು ಬೇಳೆಯನ್ನು ಕಂದು ಬಣ್ಣಕ್ಕೆ ಬರುವಂತೆ ಹುರಿಯಿರಿ. ಅಕ್ಕಿಯೊಂದಿಗೆ ಅರಿಸಿಣ ಸೇರಿಸಿ ಪುಡಿ ಮಾಡಿ. ಕಾಯಿತುರಿ, ಬೆಲ್ಲ ಏಲಕ್ಕಿ ಪುಡಿ ಸೇರಿಸಿ ಪಾಕ ಮಾಡಿ. ಬೆಂದ ಅನ್ನ ಹಾಗೂ ಬೇಳೆಗೆ ತುಪ್ಪ ಸೇರಿಸಿ, ದ್ರಾಕ್ಷಿ, ಗೋಡಂಬಿ ಹಾಕಿ ಕಲಸಿರಿ.

ಖಾರದ ಪೊಂಗಲ್

ಬೇಕಾಗುವ ಸಾಮಾನು:
ಹೆಸರು ಬೇಳೆ ಒಂದು ಕಪ್, ಅಕ್ಕಿ ಒಂದು ಕಪ್, ಕಾಯಿತುರಿ ಒಂದು ಕಪ್,  ಜೀರಿಗೆ, ಅರಿಸಿಣ, ಮೆಣಸು, ಇಂಗು, ಹಸಿಮೆಣಸಿನಕಾಯಿ, ಎಣ್ಣೆ ಅಥವಾ ತುಪ್ಪ, ಚಿದಕವರೆ, ಉಪ್ಪು.ಮಾಡುವ ವಿಧಾನ: ಹೆಸರು ಬೇಳೆಯನ್ನು ಹುರಿದು ಅಕ್ಕಿಯೊಂದಿಗೆ ಸೇರಿಸಿ ಅನ್ನ ಮಾಡಿಕೊಳ್ಳಿ. ಮೆಣಸು,  ಜೀರಿಗೆಯನ್ನು ಪುಡಿ ಮಾಡಿ ಅನ್ನಕ್ಕೆ ಸೇರಿಸಿ. ಕಾಯಿತುರಿ, ತುಪ್ಪ, ಉಪ್ಪು ಸೇರಿಸಿ ಒಂದೆರಡು ಸುತ್ತು ಕೂಡಿಸಿ. ನಂತರ ಬೆಂದ ಚಿದಕವರೆ ಸೇರಿಸಿಡಿ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)