ಗುರುವಾರ , ಮೇ 26, 2022
23 °C

ಪೊಟಾಷ್ ಪೂರೈಕೆ 40 ಲಕ್ಷ ಟನ್ ಮಾತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ(ಪಿಟಿಐ): ವಿಶ್ವದಲ್ಲಿಯೇ `ಪೊಟಾಷ್~ ಗೊಬ್ಬರ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ `ಯುರಲ್‌ಕೆಲಿ~, ಪ್ರಸಕ್ತ ವರ್ಷ ಭಾರತಕ್ಕೆ ಗೊಬ್ಬರ ಪೂರೈಕೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಇರದು ಎಂದು ಹೇಳಿದೆ.`ಪೊಟಾಷ್~ ಭಾರತದಲ್ಲಿನ ಕೃಷಿ ಚಟುವಟಿಕೆ ಬಹಳ ಅಗತ್ಯವಾಗಿ ಬೇಕಾಗಿರುವ ಗೊಬ್ಬರವಾಗಿದೆ. ಆದರೆ, ರೂಪಾಯಿ ಮೌಲ್ಯ ಕುಸಿತದ ಪರಿಣಾಮ ಅಲ್ಲಿ ಪೊಟಾಷ್ ಬಳಕೆ ಕಡಿಮೆಯಾಗುವ ಸಾಧ್ಯತೆ ಇದೆ. ಹಾಗಾಗಿ ಈ ಬಾರಿ ಭಾರತಕ್ಕೆ 40 ಲಕ್ಷ ಟನ್‌ಗಿಂತ ಹೆಚ್ಚು ಪೊಟಾಷ್ ಗೊಬ್ಬರ ಪೂರೈಕೆಯಾಗುವ ಸಾಧ್ಯತೆ ಇಲ್ಲ ಎಂದು `ಯುರಲ್‌ಕೆಲಿ~ ಕಂಪೆನಿಯ `ಸಿಇಒ~ ವ್ಲಡಿಸ್ಲೋವ್ ಬೌಮ್‌ಗರ್ಟನರ್ ಭಾನುವಾರ ಹೇಳಿದ್ದಾರೆ.2010ರಲ್ಲಿ 65 ಲಕ್ಷ ಟನ್ ಪೊಟಾಷ್ ಗೊಬ್ಬರವನ್ನು `ಇಂಡಿಯನ್ ಪೊಟಾಷ್ ಲಿಮಿಟೆಡ್~ ಮೂಲಕ ಭಾರತಕ್ಕೆ ಪೂರೈಸಲಾಗಿತ್ತು. ಈ ವರ್ಷದ ಸರಬರಾಜು ಒಪ್ಪಂದಕ್ಕೆ  ಆಗಸ್ಟ್‌ನಲ್ಲಿ ಸಹಿ ಬೀಳುವ ಸಾಧ್ಯತೆ ಇದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.