ಪೊಲೀಸರಿಂದ ಹಲ್ಲೆ: ವೈದ್ಯರ ಮುಷ್ಕರ

7

ಪೊಲೀಸರಿಂದ ಹಲ್ಲೆ: ವೈದ್ಯರ ಮುಷ್ಕರ

Published:
Updated:

ಮುಂಬೈ (ಪಿಟಿಐ): ಸಹೋದ್ಯೋಗಿ ವೈದ್ಯರೊಬ್ಬರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಖಂಡಿಸಿ ನಾಲ್ಕು ಸಾವಿರ ನಿವಾಸಿ ವೈದ್ಯರು ಗುರುವಾರದಿಂದ ಮಹಾ­ರಾಷ್ಟ್ರ­ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದ ಸೊಲ್ಲಾಪುರದ ಮೂವರು ಪೊಲೀಸರನ್ನು ಅಮಾನತು  ಮಾಡ­ಬೇಕು. ವೈದ್ಯರ ರಕ್ಷಣೆ ಕಾಯ್ದೆ 2008ರ ಅನ್ವರ ಪೊಲೀಸರ ವಿರುದ್ಧ ದೂರು ದಾಖಲಿಸಬೇಕು ಹಾಗೂ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಮುಷ್ಕರನಿರತ ವೈದ್ಯರು ಒತ್ತಾಯಿಸಿದ್ದಾರೆ

.

ಸೊಲ್ಲಾಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಮಹಿಳೆ­ಯೊಬ್ಬರ ಹೆರಿಗೆ ಸಂದರ್ಭದಲ್ಲಿ ತುರ್ತು ವಿಭಾಗದಲ್ಲಿ ಕರ್ತವ್ಯನಿರತ­ರಾಗಿದ್ದ ವೈದ್ಯರನ್ನು ಪೊಲೀಸರು ಬಲವಂತ  ಮಾಡಿದ್ದಾರೆ. ಇದಕ್ಕೆ ಸ್ಪಂದಿಸದಿದ್ದ ವೈದ್ಯರ ಮೇಲೆ ಮೂವರು ಪೊಲೀಸರು ಹಲ್ಲೆ ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry