ಪೊಲೀಸರಿಗೆ ಬೇಕು ರಕ್ಷಾ ಕವಚ

7

ಪೊಲೀಸರಿಗೆ ಬೇಕು ರಕ್ಷಾ ಕವಚ

Published:
Updated:

ಸರ್ಕಾ­ರದ ಕೆಲವು ಇಲಾಖೆಗಳಲ್ಲಿ ಇನ್ನೂ ಪುರಾ­ತನ ಕಾಲದ ವ್ಯವಸ್ಥೆ ಇದೆ. ನಕ್ಸಲ್‌ ವಿರು­ದ್ಧದ ಕಾರ್ಯಾ­ಚರಣೆ, ಭೂಗತ ಪಾತಕಿ ವಿರುದ್ಧದ ಕಾರ್ಯಾಚರಣೆಯ ಸಂದರ್ಭ­ಗಳಲ್ಲಿ ಪೊಲೀಸ್‌ ಸಿಬ್ಬಂದಿಗೆ ದೇಹ ಮತ್ತು ತಲೆಯ ರಕ್ಷಣೆಗೆ ಯಾವುದೇ ಗುಂಡು ನಿರೋ­­­ಧಕ ರಕ್ಷಾಕವಚ ಇರುವುದಿಲ್ಲ. ಆದ್ದ­ರಿಂದ­ ಕಾರ್ಯಾ­ಚರಣೆಗಳಲ್ಲಿ ನೂರಾರು ರಕ್ಷಣಾ ಸಿಬ್ಬಂದಿ ಸಾವ­ನ್ನಪ್ಪು­ವಂತಾಗಿದೆ.ಇತ್ತೀಚೆಗೆ ಗುಲ್ಬರ್ಗದಲ್ಲಿ ಭೂಗತ ಪಾತಕಿ ಮುನ್ನಾ ಮೇಲಿನ ಕಾರ್ಯಾಚರಣೆಯು ಇದಕ್ಕೆ ಹೊರತಾಗಿಲ್ಲ. ಆದ್ದರಿಂದ ಪೊಲೀಸ್‌ ಅಧಿ­­­ಕಾರಿ­ಗಳಾದ ಮಲ್ಲಿಕಾರ್ಜುನ ಬಂಡೆ, ಹಾಗೂ ಇತರರಿಗೆ ತೀವ್ರ ಸ್ವರೂ­­ಪದ ಗಾಯ­ಗಳಾಗಿವೆ. ಸರ್ಕಾರ, ಪೊಲೀಸ್‌ ಸಿಬ್ಬಂ­ದಿಗೆ ಅಗತ್ಯ ರಕ್ಷಾ ಕವಚ ನೀಡುವುದು ಸೂಕ್ತ.

 -ಡಾ. ಸೂರಪ್ಪ ನಾಯ್ಕ, ಬೆಂಗಳೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry