ಪೊಲೀಸರಿಗೆ ವೈದ್ಯಕೀಯ ಸೇವೆಯ ಅರಿವಿರಬೇಕು

7

ಪೊಲೀಸರಿಗೆ ವೈದ್ಯಕೀಯ ಸೇವೆಯ ಅರಿವಿರಬೇಕು

Published:
Updated:
ಪೊಲೀಸರಿಗೆ ವೈದ್ಯಕೀಯ ಸೇವೆಯ ಅರಿವಿರಬೇಕು

ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಪೊಲೀಸರೇ ಸಾರ್ವಜನಿಕರಿಗೆ ಅಗತ್ಯ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶಕ್ಕಾಗಿ ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ ಹಮ್ಮಿಕೊಂಡಿರುವ ಬೇಸಿಕ್ ಲೈಫ್ ಸಪೋರ್ಟ್ (ಬಿಎಲ್‌ಎಸ್) ತರಬೇತಿ ಶಿಬಿರಕ್ಕೆ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರು ಮಂಗಳವಾರ ಚಾಲನೆ ನೀಡಿದರು.ನಂತರ ಮಾತನಾಡಿದ ಮಿರ್ಜಿ ಅವರು, `ತುರ್ತು ಸಂದರ್ಭಗಳಲ್ಲಿ ಪೊಲೀಸ್ ಸಿಬ್ಬಂದಿಯೇ ಜನರಿಗೆ ಪ್ರಥಮ ಚಿಕಿತ್ಸೆಯಂತಹ ವೈದ್ಯಕೀಯ ಸೇವೆ ಒದಗಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ವೈದ್ಯಕೀಯ ಸೇವೆಯ ಬಗ್ಗೆ ಸ್ವಲ್ಪವಾದರೂ ಪರಿಣತಿ ಸಾಧಿಸಿರಬೇಕು~ ಎಂದರು.`ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ ಹಾಗೂ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಬಿಎಲ್‌ಎಸ್ ತರಬೇತಿ ಶಿಬಿರವು ಸಿಬ್ಬಂದಿಗೆ ಹೆಚ್ಚು ಉಪಯುಕ್ತವಾಗಲಿದೆ. ಸಿಬ್ಬಂದಿ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು~ ಎಂದು ಹೇಳಿದರು.`ನಗರದ ವಿವಿಧೆಡೆ ಪ್ರತಿನಿತ್ಯ ಅಪಘಾತಗಳು, ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಅಂತಹ ಸಂದರ್ಭಗಳಲ್ಲಿ ಘಟನಾ ಸ್ಥಳದಲ್ಲೇ ಇರುವ ಪೊಲೀಸರು ಗಾಯಾಳುಗಳಿಗೆ ಸಕಾಲಕ್ಕೆ ಪ್ರಥಮ ಚಿಕಿತ್ಸೆ ನೀಡಿ ಪ್ರಾಣ ರಕ್ಷಣೆ ಮಾಡಬಹುದು. ಈ ನಿಟ್ಟಿನಲ್ಲಿ ಶಿಬಿರವು ಪೊಲೀಸರಿಗೆ ಸಹಕಾರಿಯಾಗಲಿದೆ~ ಎಂದು ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ ಅಧ್ಯಕ್ಷ ಡಾ.ಎಸ್.ಸಿ.ನಾಗೇಂದ್ರಸ್ವಾಮಿ ಹೇಳಿದರು.`ಸಂಸ್ಥೆಯ ತುರ್ತು ಚಿಕಿತ್ಸಾ ವಿಭಾಗದ ಸಿಬ್ಬಂದಿ ಪೊಲೀಸರಿಗೆ ವೈದ್ಯಕೀಯ ಸೇವೆಯ ಬಗ್ಗೆ ತರಬೇತಿ ನೀಡುತ್ತಾರೆ. ಒಂದು ವರ್ಷದವರೆಗೆ ನಡೆಯುವ ಶಿಬಿರದಲ್ಲಿ ವಿವಿಧ ದರ್ಜೆಯ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ~ ಎಂದು ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ.ಸುದರ್ಶನ್ ಬಲ್ಲಾಳ್ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry