ಭಾನುವಾರ, ಜುಲೈ 25, 2021
26 °C

ಪೊಲೀಸರಿಗೆ ಹಲ್ಲೆಗೆ ಯತ್ನ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನ್ಯಾಯಾಲಯದ ವಾರೆಂಟ್ ಹಿನ್ನೆಲೆಯಲ್ಲಿ ಬಂಧನಕ್ಕೆ ಯತ್ನಿಸಿದ ಪೊಲೀಸರ ಮೇಲೆ ಹಲ್ಲೆ ನಡೆಸಿ ಓಡಿ ಹೋಗಲು ಯತ್ನಿಸಿದ ಆರೋಪಿಯನ್ನು ಉಳ್ಳಾಲ ಪೊಲೀಸರು ಸೋಮವಾರ ಬಂಧಿಸಿದ್ದಾರೆ.ಉಳ್ಳಾಲ ಮದನಿ ನಗರದ ನಾಸಿರ್ (28) ಬಂಧಿತ ಆರೋಪಿಯಾಗಿದ್ದು, ರೌಡಿ ಶೀಟರ್ ಆಗಿದ್ದ ನಾಸಿರ್‌ನನ್ನು 2010ರಲ್ಲಿ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲು ನ್ಯಾಯಾಲಯದಿಂದ ವಾರೆಂಟ್ ಹೊರಡಿಸಲಾಗಿತ್ತು.ನ್ಯಾಯಾಲಯದ ಆದೇಶದಂತೆ ಉಳ್ಳಾಲ ಠಾಣೆ ಪಿಎಸ್‌ಐ ಶ್ಯಾಮಸುಂದರ್ ಹಾಗೂ ಸಿಬ್ಬಂದಿ ಆರೋಪಿಯನ್ನು ಭಾನುವಾರ ಬಂಧಿಸಲು ತೆರಳಿದ್ದರು. ಆಗ ಪೊಲೀಸರನ್ನು ತಳ್ಳಾಡಿ ಓಡಲು ಯತ್ನಿಸಿದ ಆರೋಪಿ ನಾಸಿರ್ ಟ್ರಾವೆರಾ ವಾಹನವೊಂದಕ್ಕೆ ಹತ್ತಲು ಯತ್ನಿಸಿ ಬಿದ್ದು ಗಾಯಗೊಂಡಿದ್ದನು.ಗಾಯಾಳುವನ್ನು ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದ ಪೊಲೀಸರು ಸೋಮವಾರ ಬೆಳಿಗ್ಗೆ ಆರೋಪಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆಯೇ ಬಂಧಿಸಿದರು. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.