ಪೊಲೀಸರು ಬಂದದ್ದು...

ಬುಧವಾರ, ಮೇ 22, 2019
32 °C

ಪೊಲೀಸರು ಬಂದದ್ದು...

Published:
Updated:

ದೇಶದೊಳಗೆ ಕಾನೂನು ಶಿಸ್ತು ಕಾಪಾಡುವ ವ್ಯವಸ್ಥಿತ ಪಡೆ ಪೊಲೀಸ್. ಗಲಭೆ ಹತ್ತಿಕ್ಕಿ ಶಾಂತಿ ಪುನರ್ ಸ್ಥಾಪಿಸುವುದು, ಅಪರಾಧಿಗಳನ್ನು ಹಿಡಿಯುವುದು ಮತ್ತು ಪ್ರಜೆಗಳ ಜೀವ ಹಾಗೂ ಆಸ್ತಿಪಾಸ್ತಿ ರಕ್ಷಿಸುವುದು ಪೊಲೀಸರ ಮುಖ್ಯ ಕೆಲಸ. ಇಂದು ಪ್ರತಿಯೊಂದು ದೇಶದಲ್ಲೂ ಪೊಲೀಸ್ ವ್ಯವಸ್ಥೆ ಇದೆ. ಪೊಲೀಸ್ ವ್ಯವಸ್ಥೆ ಜಾರಿಗೆ ಬಂದ ಬಗೆ ಕುತೂಹಲಕಾರಿಯಾದುದು.ಪ್ರಾಚೀನ ಕಾಲದಲ್ಲಿ ಬುಡಕಟ್ಟು ಜನರ ನಾಯಕ ತನ್ನ ಸೈನಿಕರನ್ನು ಪೊಲೀಸರಂತೆ ಬಳಸುತ್ತಿದ್ದ. ರಾಜತ್ವದ ಕಾಲದಲ್ಲಿ ರಾಜ್ಯದಲ್ಲಿ ಅಶಾಂತಿ ತಲೆದೋರಿದಾಗ ಮುಖ್ಯಸ್ಥರು ಅಥವಾ ದೊರೆಗಳು ಯೋಧರನ್ನು ಪೊಲೀಸರಂತೆ ಬಳಸುತ್ತಿದ್ದರು. ರೋಮ್ ದೇಶದ ಸೀಸರ್ ಅಗಸ್ಟಸ್ ವಿಶ್ವದಲ್ಲೇ ಮೊದಲ ಬಾರಿಗೆ ಪೊಲೀಸ್ ವಿಶೇಷ ತುಕಡಿ ವ್ಯವಸ್ಥೆಗೊಳಿಸಿದವನು. ಈ ವ್ಯವಸ್ಥೆಯ ಪ್ರಮುಖ ಕರ್ತವ್ಯ ಕಾನೂನು, ಶಾಂತಿ, ಶಿಸ್ತು ಕಾಪಾಡುವುದು ಮತ್ತು ರಾಜಾಜ್ಞೆ ಪಾಲಿಸುವುದು. ಅದು 350 ವರ್ಷ ಮುಂದುವರಿಯಿತು.7ನೇ ಶತಮಾನದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಭದ್ರತೆಗಾಗಿ ಬಳಸುವ ಬಗ್ಗೆ ಜಾಗೃತಿ ಬಂತು. ಪೊಲೀಸ್ ಪಡೆ ಕೇವಲ ರಾಜಾಜ್ಞೆ ಪಾಲಿಸುವುದಕ್ಕಿಂತ ಜನ ಮತ್ತು ಶಾಸನವನ್ನು ಕಾಪಾಡುವುದು ಅಗತ್ಯವೆಂಬ ಭಾವನೆ ಉಂಟಾಯಿತು. ಅದೇ ನಿಟ್ಟಿನಲ್ಲಿ ಇಂಗ್ಲಿಷರು ರಕ್ಷಣೆಗಾಗಿ ಪೊಲೀಸ್ ವ್ಯವಸ್ಥೆ ಸ್ಥಾಪಿಸಿಕೊಂಡರು. 1792ರಲ್ಲಿ ಡಿ. 7ರಂದು ಭಾರತದಲ್ಲೂ ಪೊಲೀಸ್ ಪದ್ಧತಿಯನ್ನು ಈಸ್ಟ್ ಇಂಡಿಯಾ ಕಂಪೆನಿ ಆರಂಭಿಸಿತು. ಆರಂಭದಲ್ಲಿ ಪ್ರತೀ ಮುಖ್ಯಸ್ಥಳದಲ್ಲಿ ಮುಖ್ಯ ಪೊಲೀಸ್ ಅಧಿಕಾರಿ, ಸಬ್ ಇನ್ಸ್‌ಪೆಕ್ಟರ್, 10 ಮಂದಿ ಪೊಲೀಸ್ ಪೇದೆಗಳು ಮತ್ತು ಒಬ್ಬ ಪೊಲೀಸ್ ಗುಮಾಸ್ತೆ ಇರುತ್ತಿದ್ದರು. 1861ರಲ್ಲಿ ಮೊಟ್ಟ ಮೊದಲ ಪೊಲೀಸ್ ಕಾಯ್ದೆ ಜಾರಿಗೆ ಬಂತು. ಪೊಲೀಸರ ಸಮವಸ್ತ್ರ ಮತ್ತು ಸೇವಾ ಸ್ಥಿತಿಗತಿಗಳ ಬಗ್ಗೆ ನಿಯಮ ರೂಪಿಸಲಾಯಿತು. ಪ್ರಸ್ತುತ ಪ್ರತೀ ರಾಜ್ಯದಲ್ಲೂ ಪ್ರತ್ಯೇಕ ಪೊಲೀಸ್ ಪಡೆ ಕಾರ್ಯನಿರ್ವಹಿಸುತ್ತಿದೆ.  

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry