ಪೊಲೀಸರ ತಪ್ಪುಗ್ರಹಿಕೆ: ಬಂದೂಕು ಗುಂಡಿನಿಂದ ರಾಜಕುಮಾರ ಪಾರು

7

ಪೊಲೀಸರ ತಪ್ಪುಗ್ರಹಿಕೆ: ಬಂದೂಕು ಗುಂಡಿನಿಂದ ರಾಜಕುಮಾರ ಪಾರು

Published:
Updated:

ಲಂಡನ್ (ಪಿಟಿಐ): ರಾಣಿ ಎಲಿಜಬೆತ್ ಅವರ ಎರಡನೇ ಪುತ್ರ ರಾಜಕುಮಾರ ಆಂಡ್ರ್ಯೂ ಅವರನ್ನು ತಪ್ಪಾಗಿ ಗ್ರಹಿಸಿ, ಪೊಲೀಸರು ಬಂದೂಕನ್ನು ನೇರವಾಗಿ ಗುರಿಯಿಟ್ಟ ಘಟನೆ ಬಕಿಂಗ್‌ಹ್ಯಾಮ್ ಅರಮನೆಯ ಉದ್ಯಾನದಲ್ಲಿ ನಡೆದಿದೆ ಎಂದು ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.ಅರ್ಧ ನಿಮಿಷದ ಅಂತರದಲ್ಲಿ ರಾಣಿಯ 53 ವರ್ಷದ ಪುತ್ರ ಪೊಲೀಸರ ಬಂದೂಕಿನ ಗುಂಡಿಗೆ ಬಲಿಯಾಗುವ ಅಪಾಯದಿಂದ ಪಾರಾಗಿದ್ದಾರೆ. ಅರಮನೆಯ ಉದ್ಯಾನದಲ್ಲಿ ಸೂರ್ಯೋದಯದ ವೇಳೆಯಲ್ಲಿ ವಾಯುವಿಹಾರ ಮಾಡುತ್ತಾ ಅರಮನೆಯ ದೂರದ ತಿರುವಿನಲ್ಲಿ ಹೋಗುತ್ತಿದ್ದಾಗ ಅವರನ್ನು ಅಲ್ಲಿಯೇ ನಿಲ್ಲುವಂತೆ ಹೇಳಿ ಇಬ್ಬರು ಪೊಲೀಸರು ಬಂದೂಕನ್ನು ಗುರಿಯಿಟ್ಟರು. ಕೊನೆಯ ಕ್ಷಣದಲ್ಲಿ ಆತ ರಾಜಕುಮಾರ ಆಂಡ್ರ್ಯೂ ಎಂದು ತಿಳಿದಾಗ ಬಂದೂಕನ್ನು ಕೆಳಗಿಳಿಸಲಾಗಿದೆ ಎಂದು ಅರಮನೆಯ ಒಳಗಿನವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry