ಶನಿವಾರ, ಮೇ 15, 2021
25 °C

ಪೊಲೀಸರ ಮುಂದೆ ಪಾರ್ವತಿ ಹೇಳಿಕೆ:ಯಾರೂ ಅಪಹರಿಸಿರಲಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವನಹಳ್ಳಿ: `ಅಪಹರಣ ಅಥವಾ ನಾಪತ್ತೆ ಕುರಿತು ನಮ್ಮ ತಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ ಅಲ್ಲದೆ ನನ್ನನ್ನು ಯಾರೂ ಅಪಹರಣ ಮಾಡಿಲ್ಲ~ ಎಂದು ನಾಪತ್ತೆಯಾಗಿದ್ದ ಪಾರ್ವತಿ ದೇವನಹಳ್ಳಿ ಪೊಲೀಸ್ ಠಾಣೆಗೆ ಬಂದು ಸ್ವಯಂ ಹೇಳಿಕೆ ನೀಡಿದ್ದಾರೆ.`ಮಾರ್ಚ್ 30ರಂದು ಕೆಲಸಕ್ಕೆ ಹೋಗುವುದಾಗಿ ತಿಳಿಸಿದ್ದೆ. ಅಂದು ನಾನು ಕಚೇರಿಗೆ ಹೋದ ಸಂಗತಿಯನ್ನು ಪೋಷಕರ ಗಮನಕ್ಕೆ ತಂದಿರಲಿಲ್ಲ. ಕಚೇರಿ ಮುಗಿಸಿಕೊಂಡ ನಂತರ ಬೆಂಗಳೂರಿನಿಂದ ಖಾಸಗಿ ಬಸ್ ಮೂಲಕ ನೇರವಾಗಿ ಹೈದರಾಬಾದ್‌ನಲ್ಲಿರುವ ನನ್ನ ಗೆಳತಿ ಪರಿಮಳಾ ಅವರ ಮನೆಗೆ ಹೋಗಿದ್ದೆ~ ಎಂದು ವಿವರಿಸಿದ್ದಾರೆ.

ನಾನು ಈ ಹಿಂದೆ `ಸ್ವಯಂಕೃಷಿ~ ಕಚೇರಿಯಲ್ಲಿ ಮೂರು ವರ್ಷ ಕೆಲಸ ನಿರ್ವಹಿಸಿದ್ದೆ.ಈ ಸಂದರ್ಭದಲ್ಲಿ ಚಂದ್ರಕಲಾ (ನಟ ವಿರೇಂದ್ರ ಬಾಬು ಪತ್ನಿ) ಪದೇ ಪದೇ ಅಪರಿಚಿತರಿಂದ ದೂರವಾಣಿ ಕರೆ ಮಾಡಿಸಿ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ಅಲ್ಲಿ ಕೆಲಸ ಬಿಟ್ಟು ಬೇರೆಡೆ ಕೆಲಸಕ್ಕೆ ಹೋಗುತ್ತಿದ್ದೆ. `ಸ್ವಯಂಕೃಷಿ~ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ನಾನು ಅಲ್ಲಿನ ಎಲ್ಲ ಸಿಬ್ಬಂದಿಯ ಜೊತೆ ಸಹಜವಾಗಿಯೇ ಸ್ನೇಹ ವಿಶ್ವಾಸಗಳಿಂದ ಇರುತ್ತಿದ್ದೆ. ಆದರೆ ಇದನ್ನು ಬೇರೆ ರೀತಿ ಅರ್ಥೈಸಲಾಗಿದೆ.ನನ್ನ ತಂದೆ ನೀಡಿರುವ ದೂರಿನಿಂದ ನನಗೆ ತುಂಬಾ ನೋವಾಗಿದ್ದು ನಾನೀಗ ಬೇರೆಡೆ ಏಕಾಂಗಿಯಾಗಿ ಇರಲು ಬಯಸುತ್ತಿದ್ದೇನೆ. ಆದರೂ ವೀರೇಂದ್ರ ಬಾಬು ಅವರು ತಮ್ಮ ಹೆಂಡತಿ ಚಂದ್ರಕಲಾ ಅವರಿಗೆ ವಿಚ್ಛೇದನ ನೀಡಿ ಹೊರಬಂದಲ್ಲಿ ನಾನು ಅವರನ್ನು ಮದುವೆ ಮಾಡಿಕೊಳ್ಳಲು ಸಿದ್ಧನಿದ್ದೇನೆ~ ಎಂದು ಪಾರ್ವತಿ ಪೊಲೀಸರಿಗೆ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.