ಭಾನುವಾರ, ಮಾರ್ಚ್ 7, 2021
29 °C
ಛತ್ರಪತಿ ಶಿವಾಜಿ ಮಹಾರಾಜರ ಕಟೌಟ್ ಹರಿದು ಹಾಕಿದ ಪ್ರಕರಣ

ಪೊಲೀಸರ ವರ್ತನೆ ಖಂಡಿಸಿ ಮಹಿಳೆಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಲೀಸರ ವರ್ತನೆ ಖಂಡಿಸಿ ಮಹಿಳೆಯರ ಪ್ರತಿಭಟನೆ

ಶಹಾಪುರ: ಛತ್ರಪತಿ ಶಿವಾಜಿ ಮಹಾ ರಾಜರ ಕಟೌಟ್ ಹರಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಠಾಣೆಯ ಪೊಲೀಸರು ಬುಧವಾರ ಬೆಳಗಿನ ಜಾವ ಯುವಕರನ್ನು ವಿಚಾರ ಣೆಗೆ ಕರೆದುಕೊಂಡು ಹೋಗಿರುವುದನ್ನು ಖಂಡಿಸಿ  ಹಳಿಸಗರ ಬಡಾವಣೆಯ ಹೆಚ್ಚಿನ ಮಹಿಳೆಯರು ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.‘ಭಾನುವಾರದ ಕಲ್ಲು ತೂರಾಟದ ನೆಪವಾಗಿಟ್ಟುಕೊಂಡು ಪೊಲೀಸರು ಅನಾವಶ್ಯಕವಾಗಿ ನಮ್ಮ ಮಕ್ಕಳನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಕೂಲಿ ಕೆಲಸ ಹಾಗೂ ಶಾಲೆ ಓದುವ ಮಕ್ಕಳನ್ನು ಮನೆಯಲ್ಲಿ ಮಲಗಿದ್ದವರನ್ನು ಒತ್ತಾಯದಿಂದ ಜೀಪ್‌ನಲ್ಲಿ ಎಳೆದು ಕೊಂಡು ತಂದು ಕೂಡಿ ಹಾಕಿದ್ದಾರೆ. ನಮ್ಮ ಮಕ್ಕಳು ಮುಗ್ದರು ಎಂದು ಪೊಲೀ ಸರಿಗೆ ಅಂಗಲಾಚಿದರು ದೌರ್ಜನ್ಯದಿಂದ ಠಾಣೆಗೆ ತಂದು ವಿಚಾರಣೆ ನೆಪದಲ್ಲಿ ಥಳಿಸಿದ್ದಾರೆ’ ಎಂದು ಪ್ರತಿಭಟನೆನಿರತ ಮಹಿಳೆಯರು ಆರೋಪಿಸಿದರು.‘ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ನೀಡಲಿ. ಅದೆಲ್ಲವನ್ನು ಬಿಟ್ಟು ಅಮಾಯಕ ಯುವಕರನ್ನು ಬೆದರಿಸಿ ಲಾಠಿ ಬೀಸುತ್ತಿರುವುದು ನಮ್ಮನ್ನು ಕಂಗೆಡಿಸಿದೆ. ನಡೆಯಬಾರದ ಘಟನೆಯು ನಡೆದು ಹೋಗಿ ಶಾಂತವಾಗಿರುವಾಗ  ಪೊಲೀಸರು ದೌರ್ಜನ್ಯ ಎಸಗುವ ಮೂಲಕ ಭೀತಿ ಹುಟ್ಟಿಸುತ್ತಿದ್ದಾರೆ.ಯಾರು ಕಟೌಟ್ ಹರಿದು ಹಾಕಿದ್ದಾರೆ ಮೊದಲು  ಅವರ ನ್ನು ಬಂಧಿಸಿದ್ದರೆ ಸಮಸ್ಯೆ ಉದ್ಭವಿ ಸುತ್ತಿರಲಿಲ್ಲ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಸಿಟ್ಟಿನಿಂದ ಬಂಧಿಸುತ್ತಿರುವುದು ಸರಿಯಲ್ಲ. ಜನತೆ ಯ ತಾಳ್ಮೆ ಶಕ್ತಿಯನ್ನು ಪರೀಕ್ಷೆ ಮಾಡಬಾರದು’ ಎಂದು ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದರು.‘ನಗರದಲ್ಲಿ ನಡೆಯುತ್ತಿರುವ  ಪೊಲೀಸರ ವರ್ತನೆಯ ಬಗ್ಗೆ ಜನಪ್ರತಿನಿಧಿಗಳು ಆಗಲಿ ಇಲ್ಲವೆ ರಾಜಕೀಯ ಪಕ್ಷಗಳ ಮುಖಂಡರು  ಪ್ರಶ್ನಿಸದೆ ಮೌನಕ್ಕೆ ಶರಣಾಗಿದ್ದಾರೆ. ನಮಗೆ ಯಾರ ಮೇಲೆ ದ್ವೇಷವಿಲ್ಲ. ಕಹಿ ಘಟನೆಯನ್ನು ಮರೆತು ಹಾಕಿ ಸಮಾಜ ದಲ್ಲಿ ಉಂಟಾಗಿರುವ ಭೀತಿಯನ್ನು ಹೋಗಲಾಡಿಸಲು ಶಾಂತಿಸಭೆಯನ್ನು ಕರೆಯಬೇಕು’ ಎಂದು ಪ್ರತಿಭಟನೆಯಲ್ಲಿ ನಿರತ ಮಹಿಳೆಯರು ಒತ್ತಾಯಿಸಿದರು.ಬಂಧನ: ಘಟನೆಗೆ ಸಂಬಂಧಿಸಿದಂತೆ ಬುಧವಾರ ಮತ್ತೆ 7 ಯುವಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಲ್ಲದೆ ಮಂಗಳವಾರ ಒಬ್ಬ ಯುವಕನನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 29 ಯುವಕರನ್ನು ಬಂಧಿಸಿದಂತೆ ಆಗಿದೆ ಎಂದು ಪೊಲೀಸ ಮೂಲಗಳು ತಿಳಿಸಿವೆ.ಸಿ.ಸಿ ಕ್ಯಾಮೆರಾ ಅಳವಡಿಸಿ: ಶಹಾಪುರ– ಸುರಪುರ ರಾಜ್ಯ ಹೆದ್ದಾರಿಯ ಬಸವೇಶ್ವರ ವೃತ್ತದಲ್ಲಿ ಸುರಕ್ಷತೆಯ ದೃಷ್ಟಿಯಿಂದ  ಸಿ.ಸಿ.ಕ್ಯಾಮೆರಾ ಅಳವಡಿಸಲು ನಗರದ ಜನತೆ ಮನವಿ ಮಾಡಿದ್ದಾರೆ.ಗೋಗಿ(ಪಿ): ಕಟೌಟ್ ತೆಗೆಯಲು ಸೂಚನೆ ಶಹಾಪುರ: ತಾಲ್ಲೂಕಿನ ಗೋಗಿ (ಪಿ) ಗ್ರಾಮದಲ್ಲಿ ಅಹಿತಕರ ಘಟನೆ ಆಗಬಾರದೆಂದು ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿರುವ ಕಟೌಟ್ ಮತ್ತು ಬ್ಯಾನರ್‌, ಬಂಟಿಂಗ್ಸ್‌ಗಳನ್ನು ತೆಗೆದು ಹಾಕಲು ಗೋಗಿ (ಪಿ) ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ  ಗೋಗಿ ಠಾಣೆಯ ಪಿಎಸ್‌ಐ ಸೂಚಿಸಿದ್ದಾರೆ.ಪ್ರವೇಶಕ್ಕೆ ಅಂದೋಲಾ ಶ್ರೀಗೆ ನಿಷೇಧ

ಶಹಾಪುರ:
ಛತ್ರಪತಿ ಶಿವಾಜಿ ಮಹಾರಾಜರ ಕಟೌಟ್ ಹರಿದು ಹಾಕಿದ ಪ್ರಕರಣಕ್ಕೆ ಸಂಬಂಧಿ ಸಿದಂತೆ  ಜೇವರ್ಗಿ ತಾಲ್ಲೂಕು ಅಂದೋಲಾ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿಯವರಿಗೆ ಶಹಾಪುರ ನಗರ ಹಾಗೂ ತಾಲ್ಲೂಕಿನಲ್ಲಿ ಪ್ರವೇಶ ಮಾಡ ದಂತೆ  ತಾಲ್ಲೂಕು ದಂಡಾಧಿಕಾರಿ ಡಾ.ರಮೇಶ ಕೆ.ಹಾಲು  ಮಂಗಳ ವಾರ ಆದೇಶ ಹೊರಡಿಸಿದ್ದಾರೆ.

ಸ್ವಾಮೀಜಿಯವರು ಪ್ರವೇಶ ಮಾಡಿ ಭಾಷಣ ಮಾಡುವುದರಿಂದ ನಗರದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಂಭವಿರುವುದರಿಂದ ಪ್ರವೇಶವನ್ನು ಹಾಗೂ ಭಾಷಣ ಮಾಡುವುದನ್ನು ಶಹಾಪುರ ತಾಲ್ಲೂಕಿನಾದ್ಯಂತ ನಿಷೇಧಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.***

ಮನೆಯಲ್ಲಿ ಮಲಗಿದ್ದ ಮಕ್ಕಳನ್ನು ಬೆಳ್ಳಂಬೆಳಿಗ್ಗೆ ಪೊಲೀಸರು ಎಳೆದುಕೊಂಡು ಹೋಗಿ ಠಾಣೆಯಲ್ಲಿ ಕೂಡಿ ಹಾಕಿದ್ದಾರೆ. ಅಮಾಯಕರನ್ನು ಬಂಧಿಸಿ  ಪೊಲೀಸರು ದೌರ್ಜನ್ಯ ನಡೆಸಿರುವುದು ಬೇಸರ ಮೂಡಿಸಿದೆ.

-ಪ್ರತಿಭಟನಾನಿರತ ಮಹಿಳೆಯರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.