ಪೊಲೀಸರ ವಶಕ್ಕೆ

7

ಪೊಲೀಸರ ವಶಕ್ಕೆ

Published:
Updated:

ಕನಕಪುರ: ಉಪ ನೋಂದಣಿ ಕಚೇರಿಯಲ್ಲಿ ಕಚೇರಿಗೆ ಸಂಬಂಧಪಡದ ಹೊರಗಿನ ವ್ಯಕ್ತಿಗಳು ಅಕ್ರಮವಾಗಿ ಸರ್ಕಾರಿ ದಾಖಲೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಹಸೀಲ್ದಾರ್ ನೀಡಿದ ದೂರಿನ ಮೇರೆಗೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವ ಘಟನೆ ನಡೆದಿದೆ.ನೋಂದಣಿ ಕಚೇರಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳನ್ನು ದೊಡ್ಡ ಆಲಹಳ್ಳಿ ಜೈರಾಮು, ಕೋಟೆ ವೆಂಕಟೇಶ್ ಎಂದು ಗುರುತಿಸಲಾಗಿದೆ. ತಹಸೀಲ್ದಾರ್ ಡಾ.ದಾಕ್ಷಾಯಿಣಿ ಭಾನುವಾರ ತಾಲ್ಲೂಕು ಕಚೇರಿ ಕಡೆಗೆ ಬಂದಾಗ ಜೈರಾಮು ಮತ್ತು ವೆಂಕಟೇಶ್ ಉಪ ನೋಂದಣಿ ಕಚೇರಿಯಲ್ಲಿ ಸರ್ಕಾರಿ ಕಡತಗಳನ್ನು ಪರಿಶೀಲಿಸುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry