ಗುರುವಾರ , ಜನವರಿ 23, 2020
28 °C

ಪೊಲೀಸರ ವಿರುದ್ಧ ವಕೀಲರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ಬೆಂಗಳೂರಿನಲ್ಲಿ ಬುಧವಾರ ನಡೆದ ಘಟನೆಗೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ವೈಫಲ್ಯ ಕಾರಣ ಎಂದು ಆರೋಪಿಸಿ ನಗರದ ವಕೀಲರು ಗುರುವಾರ ನ್ಯಾಯಾಲಯದ ಕಾರ್ಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.ತಾಲ್ಲೂಕು ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಕೀಲರು ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಹಾಗೂ ಸರ್ಕಾರದ ಅಣಕು ಶವಯಾತ್ರೆಯೊಂದಿಗೆ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿ ವೃತ್ತದ ಬಳಿ ಪ್ರತಿಕೃತಿಗಳನ್ನು ದಹಿಸಿ ತೀವ್ರ ವಿರೋಧ ವ್ಯಕ್ತಪಡಿಸಿದರು.ಹಿರಿಯ ವಕೀಲ ಬಿ.ಆರ್.ಶ್ರೀನಾಥ್ ಮಾತನಾಡಿ ಪೊಲೀಸರಿಗೆ ವ್ಯಕ್ತಿಯನ್ನು ಬಂಧಿಸಲು ಹಾಗೂ ಹೊಡೆಯುವ ಹಕ್ಕು ಸಂವಿಧಾನಕ್ಕಿಲ್ಲ. ಸಾರ್ವಜನಿಕರ ಮೇಲೆ ಪೊಲೀಸರು ನಡೆಸುವ ದೌರ್ಜನ್ಯವನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.ವಕೀಲರಾದ ಆರ್.ಕೆ,ವೆಂಕಟರಮಣಪ್ಪ, ಜಿ.ಎಂ.ಇಬ್ರಾಹಿಂ ಮಾತನಾಡಿದರು.  

ಸಂಘದ ಉಪಾಧ್ಯಕ್ಷ ಆಂಜನೇಯರೆಡ್ಡಿ, ಕಾರ್ಯದರ್ಶಿ ವಿಜಯಕುಮಾರ್, ಮುಖಂಡರಾದ ಮುನಿರೆಡ್ಡಿ, ಪಿ.ಸಿ.ನಾರಾಯಣರೆಡ್ಡಿ, ಜೆ.ಎನ್.ವೆಂಕ ಟೇಶ್, ಎಸ್.ರಾಜಾರಂ, ಎನ್. ವಿಶ್ವ ನಾಥಶೆಟ್ಟಿ, ಎ.ಆರ್.ಶ್ರೀನಿವಾಸ ಮೂರ್ತಿ, ಈಶ್ವರಗೌಡ, ಐಮರೆಡ್ಡಿಹಳ್ಳಿ ಮಂಜುನಾಥ್, ಎಂ.ವಿಜಯ್, ಎಸ್. ಕೃಷ್ಣಮೂರ್ತಿ, ಮುಂತಾದವರು  ಭಾಗವಹಿಸಿದ್ದರು.ಕೋರ್ಟ್ ಕಲಾಪದಿಂದ ಹೊರಗುಳಿದ ವಕೀಲರು

ಗೌರಿಬಿದನೂರು: ಬೆಂಗಳೂರಿನ ಪೊಲೀ ಸರು ವಕೀಲರ ಮೇಲೆ ಅನಗತ್ಯವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಗುರುವಾರ ವಕೀಲರು ನ್ಯಾಯಾಲಯದ ಕಲಾಪ ಹೊರಗುಳಿದು ಪ್ರತಿಭಟನೆ ನಡೆಸಿದರು. ಪಟ್ಟಣದ ನಾಗಯ್ಯರೆಡ್ಡಿ ವೃತ್ತದಿಂದ ತಾಲ್ಲೂಕು ಕಚೇರಿಯವರೆಗೆ ಪ್ರತಿಭಟನೆ ನಡೆಸಿದ ಅವರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ವಕೀಲರ ಸಂಘದ ಅಧ್ಯಕ್ಷ ಎಂ.ಎಸ್ ಆನಂದ್ ಮಾತನಾಡಿ, `ಬೆಂಗಳೂರಿನಲ್ಲಿ ಪೊಲೀಸರು ವಕೀಲರ ಮೇಲೆ ಅಮಾನ ವೀಯ ಹಲ್ಲೆ ಮಾಡಿರುವುದು ಸರಿಯಲ್ಲ. ಸುಲಭವಾಗಿ ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕಾದ ಸಮಸ್ಯೆಯನ್ನು ಪೊಲೀಸರು ಅನಗತ್ಯವಾಗಿ ವಿವಾದವಾಗಿ ಸಿದ್ದಾರೆ~ ಎಂದು ಹೇಳಿದರು.

ಹಿರಿಯ ವಕೀಲ ಲಕ್ಷ್ಮಿನಾರಾಯಣ ಮಾತನಾಡಿದರು.ವಕೀಲರ ಸಂಘದ ಉಪಾಧ್ಯಕ್ಷ ಲಕ್ಷ್ಮಿಕಾಂತ್, ಕಾರ್ಯದರ್ಶಿ ರಾಮ ಚಂದ್ರಪ್ಪ, ಜಂಟಿ ಕಾರ್ಯದರ್ಶಿ ರಾಮ ಚಂದ್ರ, ಸಂಘದ ಪದಾಧಿಕಾರಿಗಳಾದ ಮಲ್ಲಿಕಾರ್ಜನ್, ನರಸಿಂಹರೆಡ್ಡಿ, ಪಾರ್ಶ್ವನಾಥ್, ವೆಂಕಟೇಶ್, ಮೆಹ ಬೂಬ್, ಗೋಪಾಲಕೃಷ್ಣ, ಶಾಂ ಶಂಕರ್‌ರಾವ್,ವಿಜಯರಾಘವ, ಬಾಬು ಮತ್ತಿತರರು ಪಾಲ್ಗೊಂಡಿದ್ದರು.ಬಾಗೇಪಲ್ಲಿ: ಪ್ರತಿಭಟನೆ

ಬಾಗೇಪಲ್ಲಿ: ಬೆಂಗಳೂರಿನಲ್ಲಿ ವಕೀಲರ ವಿರುದ್ಧ ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಪಟ್ಟಣದಲ್ಲಿ  ವಕೀಲರ ಸಂಘದ ನೇತೃತ್ವದಲ್ಲಿ ಗುರುವಾರ ವಕೀಲರು ಕೋರ್ಟ್ ಕಲಾಪಗಳಿಂದ ಹೊರಗುಳಿದು ಪ್ರತಿ ಭಟನೆ ನಡೆಸಿದರು.ತಾಲ್ಲೂಕು ವಕೀಲರ ಸಂಘದ ಕಾರ್ಯಾಧ್ಯಕ್ಷ ಸುಬ್ಬಾರೆಡ್ಡಿ ಮಾತ ನಾಡಿ, ಪೊಲೀಸರು ವಕೀಲರ ಮೇಲೆ ವಿನಾಃ ಕಾರಣ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.ವಕೀಲರ ಸಂಘದ ಅಧ್ಯಕ್ಷ ಎಚ್. ಎಸ್.ಮದನ್‌ಮೋಹನ್, ವಕೀಲರಾದ ಅಲ್ಲಾ ಬಕಾಷ್, ನರಸಿಂಹಾರೆಡ್ಡಿ, ಬಾ.ನಾ.ದತ್ತಾತ್ರೇಯ, ಬಿ.ನರಸಿಂಹ ಮೂರ್ತಿ, ಮಂಜುಳಾ, ಮುಸ್ತಾಕ್, ನಂಜುಂಡ ಇತರರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)