ಭಾನುವಾರ, ಜೂನ್ 20, 2021
20 °C

ಪೊಲೀಸ್ ಇಲಾಖೆಗೆ 100 ಕ್ಯಾಮೆರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಸಂಚಾರ ಪೊಲೀಸರಿಗೆ ನೆರವಾಗುವ ಉದ್ದೇಶದಿಂದ ಫೋರಂ ಮಾಲ್ ಮತ್ತು ಲೈಫ್ ಸ್ಟೈಲ್ ಕಂಪೆನಿಯವರು 100 ಡಿಜಿಟಲ್ ಕ್ಯಾಮೆರಾಗಳನ್ನು ನಗರ ಪೊಲೀಸ್ ಇಲಾಖೆಗೆ ಒದಗಿಸಿವೆ.ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರು ಸಂಚಾರ ಪೊಲೀಸರಿಗೆ ಕ್ಯಾಮೆರಾಗಳನ್ನು ವಿತರಿಸಿ ಮಾತನಾಡಿ, `ಇದೊಂದು ಉತ್ತಮ ಬೆಳವಣಿಗೆ. ಸಂಚಾರ ಪೊಲೀಸರು ಸದಾ ತಮ್ಮ ಬಳಿ ಕ್ಯಾಮೆರಾಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಈ ಕ್ಯಾಮೆರಾಗಳ ಸಹಾಯದಿಂದ ಸಿಬ್ಬಂದಿ, ಸಂಚಾರ ನಿಯಮ ಉಲ್ಲಂಘಿಸುವ ಚಾಲಕರ ಛಾಯಾಚಿತ್ರಗಳನ್ನು ತೆಗೆದು ಕ್ರಮ ಕೈಗೊಳ್ಳಬಹುದಾಗಿದೆ~ ಎಂದರು.ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಶುಕ್ರವಾರ ವಕೀಲರ ಪ್ರತಿಭಟನಾ ಸಭೆಯಲ್ಲಿ ಪೊಲೀಸರ ವಿರುದ್ಧ ಅವಹೇಳನಕಾರಿ ಮತ್ತು ಪ್ರಚೋದನಾಕಾರಿ ಭಾಷಣ ಮಾಡಿದ ಹಿರಿಯ ವಕೀಲೆ ಪ್ರಮಿಳಾ ನೇಸರ್ಗಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಿರ್ಜಿ, `ಪ್ರಮೀಳಾ ನೇಸರ್ಗಿ ಅವರ ಭಾಷಣದ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಪಡೆಯಲಾಗುತ್ತದೆ. ಅವರ ವಿರುದ್ಧ ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ~ ಎಂದರು.ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳಾದ ಡಾ.ಎಂ.ಎ.ಸಲೀಂ, ಟಿ.ಸುನಿಲ್‌ಕುಮಾರ್, ಫೋರಂ ಮಾಲ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ರಘುನಂದನ್, ಲೈಫ್‌ಸ್ಟೈಲ್‌ನ ವ್ಯವಸ್ಥಾಪಕ ನಿರ್ದೇಶಕ ಕಬೀರ್ ಲುಂಬ, ಎಬಿಐಡಿಇ ಸದಸ್ಯ ಆರ್.ಕೆ.ಮಿಶ್ರ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.