ಪೊಲೀಸ್ ಇಲಾಖೆ 5 ಲಕ್ಷ ಹುದ್ದೆ ಖಾಲಿ

7

ಪೊಲೀಸ್ ಇಲಾಖೆ 5 ಲಕ್ಷ ಹುದ್ದೆ ಖಾಲಿ

Published:
Updated:

ನವದೆಹಲಿ (ಪಿಟಿಐ): ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಯಲ್ಲಿ 5 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಗೃಹ ರಾಜ್ಯ ಸಚಿವ ಮುಲ್ಲಪಳ್ಳಿ ರಾಮಚಂದ್ರನ್ ಲೋಕಸಭೆಗೆ ಮಂಗಳವಾರ ತಿಳಿಸಿದರು.2011ರ ಜನವರಿಯಲ್ಲಿ 20,64,370 ಹುದ್ದೆಗಳ ನೇಮಕಕ್ಕೆ ಅನುಮೋದನೆ ದೊರೆತಿದ್ದು, ಪ್ರಸ್ತುತ ಇಲಾಖೆಯಲ್ಲಿ 15,63,301 ಪೊಲೀಸ್ ಸಿಬ್ಬಂದಿ ಇದ್ದಾರೆ ಎಂದು ರಾಮಚಂದ್ರನ್ ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದರು.ಒಂದು ಲಕ್ಷ ಜನಸಂಖ್ಯೆಗೆ 131 ಕಾನ್‌ಸ್ಟೇಬಲ್‌ಗಳಿದ್ದಾರೆ. ಆದರೆ  ಒಂದು ಲಕ್ಷ ಜನಸಂಖ್ಯೆಗೆ 173 ಪೊಲೀಸ್ ಸಿಬ್ಬಂದಿಯನ್ನು ಹೊಂದಬೇಕಾಗಿದ್ದು, ಕಾಲಕ್ಕೆ ಅನುಗುಣವಾಗಿ ನೇಮಕಾತಿ ಹೊಣೆಯನ್ನು ಆಯಾಯ ರಾಜ್ಯಗಳಿಗೆ ವಹಿಸಲಾಗಿದೆ. ನೇಮಕ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.20.248 ಎಕೆ-47 ಬಂದೂಕು, 16,734 ಗ್ಲಾರ್ಕ್ -17 ಪಿಸ್ತೂಲ್,  7,760 ಗ್ಲಾರ್ಕ್ -19, 3,641 ಗ್ಲಾರ್ಕ್ -26 ಪಿಸ್ತೂಲ್‌ಗಳನ್ನು ವಿವಿಧ ರಾಜ್ಯಗಳಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry