ಶುಕ್ರವಾರ, ನವೆಂಬರ್ 15, 2019
21 °C

ಪೊಲೀಸ್ ವಶದಲ್ಲಿದ್ದ ಅಮಿನ್ ಮರಣೋತ್ತರ ಪರೀಕ್ಷೆ ಪೂರ್ಣ

Published:
Updated:

ಬೆಂಗಳೂರು: ಗಿರಿನಗರ ಠಾಣೆಯಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದ ಅಪರಾಧ ಪ್ರಕರಣವೊಂದರ ಆರೋಪಿ ಮಹಮ್ಮದ್ ಅಮಿನ್‌ನ (30) ಮರಣೋತ್ತರ ಪರೀಕ್ಷೆ ನಗರದ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಭಾನುವಾರ ನಡೆಯಿತು.`ಅಮಿನ್‌ನ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ. ವೈದ್ಯರು ಮೂರ‌್ನಾಲ್ಕು ದಿನಗಳಲ್ಲಿ ಮರಣೋತ್ತರ ಪರೀಕ್ಷೆಯ ವರದಿ ನೀಡಲಿದ್ದಾರೆ.ಆ ನಂತರ ಸಾವಿನ ನಿಖರ ಕಾರಣ ಗೊತ್ತಾಗಲಿದೆ~ ಎಂದು ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ ಸುದ್ದಿಗಾರರಿಗೆ ತಿಳಿಸಿದರು.ಅಮಿನ್ ಸಾವಿನ ಪ್ರಕರಣ ಸಂಬಂಧ ಇಲಾಖಾ ತನಿಖೆ ನಡೆಸಲಾಗುತ್ತದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ಮರಣೋತ್ತರ ಪರೀಕ್ಷೆ ವರದಿಯನ್ನು ಪರಿಶೀಲಿಸಿದ ನಂತರ ಆ ಬಗ್ಗೆ ನಿರ್ಧರಿಸಲಾಗುವುದು~ ಎಂದರು.

ಗಿರಿನಗರ ಪೊಲೀಸರು ಜೇಬುಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ (ಜು.13) ಅಮಿನ್‌ನನ್ನು ಬಂಧಿಸಿದ್ದರು. ಪೊಲೀಸ್ ಕಸ್ಟಡಿಯಲ್ಲಿದ್ದ ಆತ ಠಾಣೆಯಲ್ಲಿ ಶನಿವಾರ ಅಸ್ವಸ್ಥಗೊಂಡಿದ್ದ. ನಂತರ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದ.

ಪ್ರತಿಕ್ರಿಯಿಸಿ (+)