ಪೊಲೀಸ್ ಸಮವಸ್ತ್ರ ಬದಲಾವಣೆಗೆ ಸರ್ಕಾರ ಚಿಂತನೆ

7

ಪೊಲೀಸ್ ಸಮವಸ್ತ್ರ ಬದಲಾವಣೆಗೆ ಸರ್ಕಾರ ಚಿಂತನೆ

Published:
Updated:

ಬಳ್ಳಾರಿ: ಪೊಲೀಸ್ ಸಮವಸ್ತ್ರವನ್ನು ಬದಲಾಯಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ನಗರದಲ್ಲಿ ಭಾನುವಾರ ಸಂಜೆ ನಡೆದ ಪೊಲೀಸ್ ಇಲಾಖೆಯ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ   ವಿದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಪೊಲೀಸರ ಅತ್ಯಾಕರ್ಷಕ ಸಮವಸ್ತ್ರವನ್ನು ಗಮನಿಸಿ, ರಾಜ್ಯ ಪೊಲೀಸ್ ಸಮವಸ್ತ್ರವನ್ನೂ ಬದಲಾಯಿಸುವಂತೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ್ದಾಗಿ ಹೇಳಿದರು.ಈ ಕುರಿತು ಗೃಹ ಸಚಿವರೊಂದಿಗೆ ಸಮಗ್ರವಾಗಿ ಸಮಾಲೋಚನೆ ನಡೆಸಿ, ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry