ಶುಕ್ರವಾರ, ನವೆಂಬರ್ 15, 2019
21 °C

ಪೊವೆಲ್‌ಗೆ ಫಿಸಿಯೊ ತಿರುಗೇಟು

Published:
Updated:

ಪ್ಯಾರಿಸ್, ಫ್ರಾನ್ಸ್ (ಎಎಫ್‌ಪಿ): ಉದ್ದೀಪನ ಮದ್ದು ಸೇವನೆ ವಿವಾದಕ್ಕೆ ಸಂಬಂಧಿಸಿದಂತೆ ಜಮೈಕಾದ ಅಸಾಫಾ ಪೊವೆಲ್ ಹಾಗೂ ಶೇರೊನ್ ಸಿಂಪ್ಸನ್ ಮಾಡಿರುವ ಆರೋಪಕ್ಕೆ ಕೆನಡಾದ ಫಿಸಿಯೊ ಕ್ರಿಸ್ಟೋಫರ್ ಕ್ಸುರೆಬ್ ಕಿಡಿಕಾರಿದ್ದಾರೆ.ಉದ್ದೀಪನ ಮದ್ದು ಸೇವಿಸಿದ ಸಂಕಷ್ಟ ಎದುರಿಸುತ್ತಿರುವ ಶ್ರೇಷ್ಠ ಅಥ್ಲೀಟ್‌ಗಳಾದ ಪೊವೆಲ್ ಮತ್ತು ಸಿಂಪ್ಸನ್ ಅವರು, `ನಮ್ಮ ಈ ಸ್ಥಿತಿಗೆ ಫಿಸಿಯೊ ಕಾರಣ' ಎಂದು ಆರೋಪಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಫಿಸಿಯೊ ಕ್ಸುರೆಬ್ `ಪೊವೆಲ್ ಯಾವಾಗಲೂ ಕಠಿಣ ಅಭ್ಯಾಸ ನಡೆಸುತ್ತಿದ್ದರು. 2013ರ ಮೇ ತಿಂಗಳಲ್ಲಿ ಅವರು ಗಾಯದಿಂದ ಪೂರ್ಣವಾಗಿ ಚೇತರಿಸಿಕೊಂಡು ಅಭ್ಯಾಸ ಆರಂಭಿಸಿದ್ದರು. ಅವರ ಬಗ್ಗೆ ನನಗೆ ತುಂಬಾ ಗೌರವವಿತ್ತು. ನನ್ನ ವಿರುದ್ಧವೇ ಟೀಕೆ ಮಾಡುತ್ತಾರೆಂದು ಎಣಿಸಿರಲಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.`ಪೋಷಾಕಾಂಶ ನೀಡುವಲ್ಲಿ ವ್ಯತ್ಯಾಸವಾಗಿರುವುದೇ ನಮ್ಮ ಈ ಸ್ಥಿತಿಗೆ ಕಾರಣ. ಹೊಸ ಫಿಸಿಯೊನಿಂದ ನಮಗೆ ಕೆಟ್ಟ ಹೆಸರು ಬಂದಿದೆ' ಎಂದು ಜಮೈಕಾದ ಅಥ್ಲೀಟ್‌ಗಳು ದೂರಿದ್ದರು. ಕ್ಸುರೆಬ್ ಅವರನ್ನು ಪೊಲೀಸರು ಈಗಾಗಲೇ ತನಿಖೆಗೆ ಒಳಪಡಿಸಿದ್ದಾರೆ. `ಅಥ್ಲೀಟ್‌ಗಳಿಗೆ ನಾನು ಯಾವುದೇ ಮೋಸ ಮಾಡಿಲ್ಲ' ಎಂದು ಕ್ಸುರೆಬ್ ನುಡಿದರು.

ಪ್ರತಿಕ್ರಿಯಿಸಿ (+)