ಬುಧವಾರ, ಮೇ 19, 2021
26 °C

`ಪೋರ' ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾ. ಶೈಲೇಂದ್ರ ಬೆಳೆದಾಳ್, ದೇವರಾಜ್ ಶಿಡ್ಲಘಟ್ಟ ನಿರ್ಮಿಸುತ್ತಿರುವ  `ಪೋರ' ಚಿತ್ರದ ಚಿತ್ರೀಕರಣ ಐತಿಹಾಸಿಕ ಬೀದರ್ ಕೋಟೆಯಲ್ಲಿ ನಡೆಯಿತು.

ರಾತ್ರಿ ಸ್ನೇಹಿತರ ಜತೆ ಪಾನಗೋಷ್ಠಿ ನಡೆಸಿದ ಮಧುಮಗ ಪುರಂದರ ಬೆಳಿಗ್ಗೆ ಮದುವೆ ಮನೆಯಿಂದ ಪರಾರಿಯಾಗುತ್ತಾನೆ. 

ವಧುವಿನ ತಂದೆ ಆತಂಕದಿಂದ ವರನನ್ನು ಹುಡುಕಾಡುವ ದೃಶ್ಯವನ್ನು ಕೋಟೆ ಸುತ್ತಲಿನ ಪ್ರದೇಶದಲ್ಲಿ ಚಿತ್ರೀಕರಿಸಲಾಯಿತು. ನಾಯಕ ಅಮೋಘ್, ನಾಯಕಿ ವ್ಯಾಲರಿ, ಗಿರೀಶ್ ಕಾರ್ನಾಡ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.ನಾಯಕ ಅಮೋಘ್ ಕಥೆ, ಚಿತ್ರಕತೆ ಬರೆದು ನಿರ್ದೇಶಿಸುತ್ತಿರುವ ಚಿತ್ರಕ್ಕೆ ನಿರಂಜನ್ ಬಾಬು ಛಾಯಾಗ್ರಹಣ, ಕೆ.ಎಂ. ಇಂದ್ರ ಸಂಭಾಷಣೆ ಮತ್ತು ಸಂಗೀತ ನೀಡಿದ್ದಾರೆ. ಟಿ.ಎಸ್. ನಾಗಾಭರಣ, ಸುಧಾರಾಣಿ, ಸುಮಿತ್ರ, ರಾಜು ತಾಳಿಕೋಟೆ ತಾರಾಗಣದಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.