ಮಂಗಳವಾರ, ನವೆಂಬರ್ 19, 2019
23 °C

ಪೋಲಾರಿಸ್ `ಆಫ್ ರೋಡ್'

Published:
Updated:

ಬೆಂಗಳೂರು: ಇತ್ತೀಚೆಗೆ ರೇಸಿಂಗ್ ವಾಹನಗಳು ಕ್ರೀಡೆ ಮತ್ತು ಮನರಂಜನೆ ವಿಭಾಗದಲ್ಲಿ ಹೆಚ್ಚು ಜನಪ್ರಿಯಗೊಳ್ಳು ತ್ತಿವೆ. ಬೆಂಗಳೂರಿನಲ್ಲಿಯೂ ರೇಸಿಂಗ್ ವಾಹನಗಳನ್ನು ಹೆಚ್ಚು ಇಷ್ಟಪಡುವ ದೊಡ್ಡ ವರ್ಗವೇ ಎಂದು `ಪೋಲಾರಿಸ್ ಇಂಡಿಯ' ವ್ಯವಸ್ಥಾಪಕ ನಿರ್ದೇಶಕ ಪಂಕಜ್ ದುಬೆ ಹೇಳಿದರು.ಯಶವಂತಪುರ, ಸರ್ಜಾಪುರದಲ್ಲಿ ರೇಸಿಂಗ್‌ಗಾಗಿ ಅಭಿವೃದ್ಧಿಪಡಿಸಿದ 2 `ಆಫ್ ರೋಡ್' (ಹಳ್ಳಕೊಳ್ಳದ ರಸ್ತೆ) ಸೌಲಭ್ಯ ಉದ್ಘಾಟಿಸಿ, ರಕ್ಷಣಾ ಕ್ಷೇತ್ರ, ಅರಣ್ಯ ಕಾವಲು, ಮನರಂಜನೆ, ಕೃಷಿ, ಕ್ರೀಡಾ ವಿಭಾಗಗಳಿಗಾಗಿ ಶಕ್ತಿಶಾಲಿ (50 ರಿಂದ 900 ಸಿಸಿ) ವಾಹನಗಳನ್ನು ಕಂಪೆನಿ ತಯಾರಿಸುತ್ತಿದ್ದು, ಉತ್ತಮ ಬೇಡಿಕೆ ಇದೆ ಎಂದು ವಿವರಿಸಿದರು.

ಪ್ರತಿಕ್ರಿಯಿಸಿ (+)