ಭಾನುವಾರ, ಜನವರಿ 19, 2020
23 °C

ಪೋಲಿಯೊ ಕಾರ್ಯಕರ್ತ ಉಗ್ರರ ಗುಂಡೇಟಿಗೆ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೇಶಾವರ (ಪಿಟಿಐ): ಪೋಲಿಯೊ ಕಾರ್ಯಕರ್ತನೊಬ್ಬ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿರುವ ಘಟನೆ ಪಾಕಿಸ್ತಾನ­ದಲ್ಲಿ ನಡೆದಿದೆ.

ವಾಯವ್ಯ ಭಾಗದ ಹಿಂಸಾಪೀಡಿತ ಪ್ರದೇಶಕ್ಕೆ ಔಷಧಗಳನ್ನು ಸಾಗಿಸುತ್ತಿ­ದ್ದಾಗ ದಾಳಿ ನಡೆದಿದೆ. ಮೃತ­ನನ್ನು ಗಾಲಿಬ್‌ ಎಂದು ಗುರುತಿಸಲಾಗಿದೆ.‘ದಾಳಿಗೊಳಗಾದ ವ್ಯಕ್ತಿಯ ಪಕ್ಕ­ಬಂದೂಕುಧಾರಿಗಳು ಪತ್ರವೊಂದನ್ನು ಬಿಟ್ಟು ಹೋಗಿದ್ದು, ಸರ್ಕಾರೇತರ ಸಂಸ್ಥೆ ಪರ ಪೋಲಿಯೋ ಅಭಿಯಾನ ನಡೆಸುವ ವರನ್ನು ಇದೇ ರೀತಿ ಗುರಿ­ಯಾಗಿಸ­ಲಾಗು­ವುದು ಎಂದು ಬರೆ­ಯ­­ಲಾಗಿದೆ’ ಎಂದು ಸ್ಥಳೀಯ ಆಡ­ಳಿತಾಧಿಕಾರಿ ಜಹಾಂಗೀರ್‌ ಆಜಮ್‌ ವಜೀರ್‌ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)