ಮಂಗಳವಾರ, ನವೆಂಬರ್ 12, 2019
28 °C

ಪೋಲಿಯೊ ನಿರ್ಮೂಲನೆ ಅಭಿಯಾನದಲ್ಲಿ ಆದಿತ್ಯ ಬಿರ್ಲಾ ಸಮೂಹ

Published:
Updated:

ಬೆಂಗಳೂರು: ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ `ಪೋಲಿಯೊ ನಿರ್ಮೂಲನೆ ಅಭಿಯಾನ'ಕ್ಕೆ ಆದಿತ್ಯ ಬಿರ್ಲಾ ಸಮೂಹವೂ ಕೈಜೋಡಿಸಿದೆ ಎಂದು `ಆದಿತ್ಯ ಬಿರ್ಲಾ ಸಮುದಾಯ ಮತ್ತು ಗ್ರಾಮೀಣ ಅಭಿವೃದ್ಧಿ ಕೇಂದ್ರ'ದ ಅಧ್ಯಕ್ಷೆ ರಾಜಶ್ರೀ ಬಿರ್ಲಾ ಹೇಳಿದ್ದಾರೆ.ಕೇಂದ್ರ ಆರೋಗ್ಯ ಇಲಾಖೆ, ರೋಟರಿ ಇಂಟರ್‌ನ್ಯಾಷನಲ್, ಆದಿತ್ಯ ಬಿರ್ಲಾ ಸಮೂಹ ಜತೆಗೂಡಿ `ಪೋಲಿಯೊ ನಿರ್ಮೂಲನೆ ಅಭಿಯಾನ' ಹಮ್ಮಿಕೊಂಡಿದ್ದು, ಪ್ರತಿ ವರ್ಷ ದೇಶದ 17  ಕೋಟಿ ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ ಇಟ್ಟುಕೊಳ್ಳಲಾಗಿದೆ. ಈ ವರ್ಷವೂ ಗುರಿ ಮುಟ್ಟುವಲ್ಲಿ ಯಶಸ್ಸು ಗಳಿಸುವೆವು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)