ಪೋಷಕರಿಗಾಗಿ ಕಾರ್ಯಾಗಾರ

ಮಂಗಳವಾರ, ಜೂಲೈ 23, 2019
20 °C

ಪೋಷಕರಿಗಾಗಿ ಕಾರ್ಯಾಗಾರ

Published:
Updated:

`ನಿಮ್ಮ ಮಗುವನ್ನು ಅರಿತುಕೊಳ್ಳಿ ಮತ್ತು ಹದಿಹರೆಯದ ಮಕ್ಕಳನ್ನು ತಿಳಿದುಕೊಳ್ಳಿ' ಎಂಬ ಕಾರ್ಯಾಗಾರವು ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಕೇಂದ್ರದಲ್ಲಿ ಇದೇ ಭಾನುವಾರ ನಡೆಯಲಿದೆ.ತಂದೆ ತಾಯಂದಿರುವ ಮತ್ತು ಪೋಷಕರು ತಮ್ಮ ಮಗುವಿನೊಂದಿಗೆ ಆಪ್ತವಾದ ಸಂಬಂಧ ಬೆಳೆಸುವ ನಿಟ್ಟಿನಲ್ಲಿ ಏರ್ಪಡಿಸಲಾಗಿರುವ ಈ ಕಾರ್ಯಾಗಾರದಲ್ಲಿ ಮಕ್ಕಳು ಬಾಲ್ಯದಲ್ಲಿ ಮತ್ತು ಹದಿಹರೆಯದಲ್ಲಿ ಮಾನಸಿಕವಾಗಿ ಹೇಗೆ ಬದಲಾಗುತ್ತಾರೆ, ಅವರಲ್ಲಿನ ಬದಲಾವಣೆಗಳ ಕುರಿತ ಚರ್ಚೆ, ಸಂವಾದ ಹಾಗೂ ಯಾವುದೇ ಸಂದರ್ಭಗಳನ್ನು ಎದುರಿಸಲು ಅವರನ್ನು ಸಜ್ಜುಗೊಳಿಸುವ ಬಗೆ ಹೇಗೆ ಎಂಬ ಅಂಶಗಳನ್ನು ತಿಳಿದುಕೊಳ್ಳಲು ಅವಕಾಶವಿರುತ್ತದೆ.ಭಾನುವಾರ ಮಧ್ಯಾಹ್ನ ಆರಂಭವಾಗುವ ಈ ಕಾರ್ಯಾಗಾರದಲ್ಲಿ ನವಜಾತ ಶಿಶುಗಳಿಂದ ಹದಿಹರೆಯದವರೆಗಿನ ಮಕ್ಕಳ ತಂದೆ ತಾಯಂದಿರುವ ಪಾಲ್ಗೊಳ್ಳಬಹುದು.ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 99866 73892, www.artofliving.org/in-en/novice-know-your-child ,   www.artofliving.org/know-your-teen

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry