ಪೋಷಕರ ಮೇಲೂ ದೂರು ದಾಖಲಿಸಲು ನಿರ್ಧಾರ

7
ವ್ಹೀಲಿಂಗ್‌ ಪ್ರಕರಣಗಳ ತಡೆಗೆ ಪೊಲೀಸರ ಕಠಿಣ ಕ್ರಮ

ಪೋಷಕರ ಮೇಲೂ ದೂರು ದಾಖಲಿಸಲು ನಿರ್ಧಾರ

Published:
Updated:

ಬೆಂಗಳೂರು: ವ್ಹೀಲಿಂಗ್‌ (ಬೈಕ್‌ನ ಒಂದು ಚಕ್ರವನ್ನು ಮೇಲಕ್ಕೆ ಎತ್ತಿ ವಾಹನ ಚಾಲನೆ ಮಾಡುವುದು) ಪ್ರಕರ­ಣ­ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿ­ರುವ ನಗರ ಪೊಲೀಸರು ವ್ಹೀಲಿಂಗ್‌ ಮಾಡುವ 18 ವರ್ಷಕ್ಕಿಂತ ಕಿರಿಯ ಬೈಕ್‌ ಸವಾರರ ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಲು ನಿರ್ಧರಿಸಿ­ದ್ದಾರೆ.‘ವ್ಹೀಲಿಂಗ್‌ ಅಥವಾ ಡ್ರ್ಯಾಗ್‌ ರೇಸ್‌ ಪ್ರಕರಣಗಳನ್ನು ನಿಯಂತ್ರಿಸಲು ಮತ್ತು ಇತರೆ ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳ­ಲಾಗು­ತ್ತಿದೆ’ ಎಂದು ನಗರದ ಸಂಚಾರ ವಿಭಾ­ಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ‘ಪ್ರಜಾ­ವಾಣಿ’­ಗೆ ತಿಳಿಸಿದರು.‘ಸಾರ್ವಜನಿಕ ರಸ್ತೆಯಲ್ಲಿ ವ್ಹೀಲಿಂಗ್‌ ಅಥವಾ ಡ್ರ್ಯಾಗ್‌ ರೇಸ್‌ ಮಾಡು­ವು­ದನ್ನು ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ನಿರ್ಬಂಧಿಸ­ಲಾಗಿದೆ. ಅಲ್ಲದೇ, ಕಾಯ್ದೆಯ ಸೆಕ್ಷನ್‌ ನಾಲ್ಕು ಮತ್ತು ಐದರ ಅನ್ವಯ ವ್ಹೀಲಿಂಗ್‌ ಅಥವಾ ಡ್ರ್ಯಾಗ್‌ ರೇಸ್‌ ಮಾಡುವ 18 ವರ್ಷಕ್ಕಿಂತ ಕೆಳಗಿನ ವಯೋಮಾನದ ಬೈಕ್‌ ಸವಾರರ ಪೋಷಕರ ಮೇಲೂ ಪ್ರಕರಣ ದಾಖಲಿಸಬಹುದು. ಆ ಸೆಕ್ಷನ್‌ಗಳನ್ನು ಆಧರಿಸಿ ಇನ್ನು ಮುಂದೆ ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸುತ್ತೇವೆ’ ಎಂದು ಹೇಳಿದ್ದಾರೆ.ವ್ಹೀಲಿಂಗ್‌ ಅಥವಾ ಡ್ರ್ಯಾಗ್‌ ರೇಸ್‌ ಮಾಡುವವರ ಮೇಲೆ ಪ್ರಕರಣ ದಾಖ­ಲಿ­ಸುವುದರ ಜತೆಗೆ ಅವರ ವಾಹನ­ವನ್ನು ಜಪ್ತಿ ಮಾಡಿ ನ್ಯಾಯಾಲಯದ ವಶಕ್ಕೆ ಒಪ್ಪಿಸುತ್ತೇವೆ. ಅಲ್ಲದೇ, ಅವರ ಚಾಲನಾ ಪರವಾನಗಿ­ಯನ್ನು (ಡಿ.ಎಲ್‌) ­ಮುಟ್ಟುಗೋಲು ಹಾಕಿ­ಕೊಳ್ಳು­ವಂತೆ ಸಾರಿಗೆ ಇಲಾಖೆಗೆ ವರದಿ ಕಳುಹಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry