ಸೋಮವಾರ, ಮೇ 16, 2022
29 °C

ಪೋಸ್ಟಲ್‌ಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೋಪಿ ತಂದಿತ್ತ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಪೋಸ್ಟಲ್ ಫುಟ್‌ಬಾಲ್ ಕ್ಲಬ್ ತಂಡದವರು ಇಲ್ಲಿ ನಡೆಯುತ್ತಿರುವ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದ್ದಾರೆ.ಅಶೋಕನಗರದಲ್ಲಿರುವ ಬಿಡಿಎಫ್‌ಎ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಪೋಸ್ಟಲ್ 5-1 ಗೋಲುಗಳಿಂದ ಬಿಇಎಲ್ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಸತತ ಆರನೇ ಪಂದ್ಯದಲ್ಲಿ ಬಿಇಎಲ್ ಆಘಾತ ಕಂಡಿತು. ಪೋಸ್ಟಲ್ ಈಗ ಐದು ಪಂದ್ಯಗಳಿಂದ ಆರು ಪಾಯಿಂಟ್ ಹೊಂದಿದೆ.6ನೇ, 20ನೇ ಹಾಗೂ 73ನೇ ನಿಮಿಷದಲ್ಲಿ ಗೋಪಿ ಚೆಂಡನ್ನು ಗುರಿ ಸೇರಿಸಿದರು. ಈ ತಂಡದ ಅರುಣ್ ಪಾಂಡೆ (76ನೇ ನಿ.) ಹಾಗೂ ಶರತ್ (80ನೇ ನಿ.) ಇನ್ನುಳಿದ ಎರಡು ಗೋಲು ಗಳಿಸಿದರು. ಬಿಇಎಲ್‌ನ ಏಕೈಕ ಗೋಲಿನ ರೂವಾರಿ ಮೋಹನ್ (44ನೇ ನಿ.).ಪೋಸ್ಟಲ್ ಆರಂಭದಿಂದಲೇ ಎದುರಾಳಿಯ ಮೇಲೆ ಒತ್ತಡ ಹೇರಿ ಯಶಸ್ವಿಯಾಯಿತು. ಶರತ್ ಹಾಗೂ ಗೋಪಿ ಬಿಇಎಲ್‌ನ ರಕ್ಷಣಾ ಆಟಗಾರರಿಗೆ ಸುಧಾರಿಸಿಕೊಳ್ಳಲು ಕೊಂಚವೂ ಅವಕಾಶ ನೀಡಲಿಲ್ಲ. ಆದರೆ ಶರತ್ 10 ಹಾಗೂ 13ನೇ ನಿಮಿಷದಲ್ಲಿ ದೊರೆತ ಅವಕಾಶವನ್ನು ತಪ್ಪಿಸಿಕೊಂಡರು. ಬಿಇಎಲ್‌ಗೆ ಹೆಚ್ಚು ಅವಕಾಶ ಸಿಗಲಿಲ್ಲ. ಇದಕ್ಕೆ ಕಾರಣ ಈ ತಂಡದಲ್ಲಿನ ಹೊಂದಾಣಿಕೆ ಕೊರತೆ.ಮಾರ್ಸ್‌ಗೆ ಜಯ: ಬೆಂಗಳೂರು ಮಾರ್ಸ್‌ ತಂಡ `ಎ~ ಡಿವಿಷನ್ ಲೀಗ್‌ನ ಪಂದ್ಯದಲ್ಲಿ ಗೆಲುವು ಸಾಧಿಸಿದರು. ಈ ತಂಡದವರು 3-1 ಗೋಲುಗಳಿಂದ ಧರ್ಮರಾಜ್ ಯೂನಿಯನ್ ತಂಡವನ್ನು ಮಣಿಸಿತು.ವಿರಾಮದ ವೇಳೆಗೆ 2-0ರಲ್ಲಿ ಮುನ್ನಡೆ ಹೊಂದಿದ್ದ ಮಾರ್ಸ್‌ ತಂಡದ ಯು.ಬಾಬು (16ನೇ ನಿ.), ಶರತ್ (19ನೇ ಹಾಗೂ 64ನೇ ನಿ.) ಗೋಲು ಗಳಿಸಿದರು.

ಧರ್ಮರಾಜ್ ಯೂನಿಯನ್ ತಂಡದ ಗಿಲಿಯಟ್ (69ನೇ ನಿ.) ಚೆಂಡನ್ನು ಗುರಿ ಸೇರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.